ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪೊಲೀಸ್ ಠಾಣೆಯ ಎದುರೆ ಮದ್ಯ ಸೇವಿಸಿ ಕುಡುಕ ಮಹಾಶಯ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ನಡೆದಿದೆ.
ಪೊಲೀಸ್ ಠಾಣೆ ಮುಂದೆಯೇ ಕುಳಿತು ಎಣ್ಣೆ ಕುಡಿದಿರುವ ಘಟನೆ ನಡೆದಿದ್ದು, ಎಣ್ಣೆ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಗೋಕಾಕ್ ಶಹರ ಪೊಲೀಸ್ ಠಾಣೆಯ ಮುಂದೆ ಘಟನೆ ನಡೆದಿದೆ. ಎಣ್ಣೆ ಹಾಗೂ ಸ್ನ್ಯಾಕ್ಸ್ ಜೊತೆ ಬಂದ ಮದ್ಯಪ್ರಿಯ ಮಹಾಶಯ ರಾಜಾರೋಷವಾಗಿ ಒಬ್ಬನೇ ಕುಳಿತು ಮಧ್ಯ ಸೇವಿಸಿದ್ದಾನೆ. ಈ ಘಟನೆ ಪೊಲೀಸ್ ಠಾಣೆಯ ಮುಂದೆ ಜನರಿದ್ದರೂ ಡೊಂಟ್ ಕೇರ್ ಎಂದಿದ್ದಾನೆ. ಜನ ಓಡಾಡುತ್ತಿದ್ದರೂ ಸಹ ತನ್ನಷ್ಟಕ್ಕೆ ತಾನು ಕುಳಿತು ಮಧ್ಯ ಕುಡಿದು ಕಿಕ್ ಏರಿಸಿಕೊಂಡಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ