Kannada NewsKarnataka News

ಸಂತ್ರಸ್ತರಿಗೆ ಬಟ್ಟೆ, ಸಾಮಗ್ರಿ ವಿತರಿಸಿದ ಹುಕ್ಕೇರಿ ಶ್ರೀ, ಲಕ್ಷ್ಮಿ ಹೆಬ್ಬಾಳಕರ್

ಸಂತ್ರಸ್ತರಿಗೆ ಬಟ್ಟೆ, ಸಾಮಗ್ರಿ ವಿತರಿಸಿದ ಹುಕ್ಕೇರಿ ಶ್ರೀ, ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಹಿರೇ ಬಾಗೇವಾಡಿಯ ಪ್ರವಾಹ ಪೀಡಿತ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿದ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸಂತ್ರಸ್ತರಿಗೆ ಬಟ್ಟೆ ಮತ್ತಿತರ ಸಾಮಗ್ರಿಗಳನ್ನು ವಿತರಿಸಿದರು.

Home add -Advt

ರೊಟ್ಟಿ, ಚಟ್ನಿ, ಬಿಸ್ಕೆಟ್, ಹೊದಿಕೆ, ಬೆಡ್ ಸೀಟ್, ರಗ್ಗು ಮುಂತಾದವುಗಳನ್ನು ವಿತರಿಸಲಾಯಿತು. ಸಂತ್ರಸ್ತರ ಸಮಸ್ಯೆಗಳನ್ನು ಆಸಲಿಸಿದ ಶ್ರೀಗಳು ಮತ್ತು ಹೆಬ್ಬಾಳಕರ್, ಯಾರೂ ಹೆದರುವ ಅವಶ್ಯಕತೆ ಇಲ್ಲ. ನಾವೂ ನಿಮ್ಮೊಂದಿಗಿದ್ದೇವೆ. ಸರಕಾರದಿಂದಲೂ ಪರಿಹಾರವನ್ನು ಕೊಡಿಸಲಾಗುವುದು ಎಂದು ಧೈರ್ಯವನ್ನು ತುಂಬಿದರು .

ಬೈಲಹೊಂಗಲದ ಮಹಾಂತೇಶ ಆರಾದ್ರಿಮಠ ವೇದ ಮೂರ್ತಿಗಳು, ಗ್ರಾಮಸ್ಥರು, ಸಿ ಸಿ ಪಾಟೀಲ್,  ಚನ್ನರಾಜ ಹಟ್ಟಿಹೊಳಿ, ಸುರೇಶ ಇಟಗಿ, ರಾಮನಗೌಡ, ಜಾಲಿಕೊಪ್ಪ, ಬಸವರಾಜ ಮ್ಯಾಗೋಟಿ, ಶ್ರೀಕಾಂತ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button