Kannada NewsKarnataka NewsNational

*ಕಾರು ನಿಲ್ಲಿಸಿದ ಪೊಲೀಸ್ ಅಧಿಕಾರಿಗಳನ್ನೆ ಎಳೆದೊಯ್ದ ಅಪ್ರಾಪ್ತ ಕಾರು ಚಾಲಕ*

ಪ್ರಗತಿವಾಹಿನಿ ಸುದ್ದಿ: ಕಾರೊಂದನ್ನು ನಿಲ್ಲಿಸಲು ಯತ್ನಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕಾರಿನ ಬಾನೆಟ್ ಮೇಲೆ 20 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದಿರುವ ಘಟನೆ ನೈಋತ್ಯ ದೆಹಲಿಯ ಬೆರ್ ಸರೈ ಪ್ರದೇಶದಲ್ಲಿ ನಡೆದಿದೆ.

ದೆಹಲಿಯ ವೇದಾಂತ್ ದೇಶಿಕಾ ಮಾರ್ಗ್ ಬಳಿಯ ಬೆರ್ ಸರೈ ಸಂಚಾರಿ ಸಿಗ್ನಲ್ ಬಳಿ ಈ ಘಟನೆ ನಡೆದಿದೆ. ವಾಹನದಲ್ಲಿದ್ದ ಇಬ್ಬರೂ ಅಪ್ರಾಪ್ತರು ಎಂದು ಗುರುತಿಸಲಾಗಿದೆ. ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ರೆಡ್ ಲೈಟ್ ಇದ್ದರೂ ನಿಲ್ಲಿಸದೆ ಸಂಚರಿಸಿದ ಕಾರೊಂದನ್ನು ನಿಲ್ಲಿಸಲು ಹೆಡ್ ಕಾನ್ಸ್ ಟೇಬಲ್ ಪ್ರಯತ್ನಿಸಿದರು ಆದರೂ, ಚಾಲಕ ಅಲ್ಲಿಂದ ವೇಗ ಹೆಚ್ಚಿಸಿ ಪರಾರಿಯಾಗಲು ಯತ್ನಿಸಿದಾಗ ಇಬ್ಬರು ಅಧಿಕಾರಿಗಳನ್ನು ಸುಮಾರು 20 ಮೀಟರ್ ದೂರದವರೆಗೂ ಕಾರಿನ ಬಾನೆಟ್ ಮೇಲೆ ಎಳೆದೊಯ್ಯಲಾಯಿತು ಎಂದು ಗಾಯಗೊಂಡ ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

ಚಾಲಕ ಕಾರನ್ನು ಮುಂದಕ್ಕೆ ಮತ್ತು ಹಿಂದಕ್ಕೆ ಸರಿಸಿದಾಗ ಇಬ್ಬರು ಪೊಲೀಸರು ಬಾನೆಟ್ ಮೇಲೆ ಬಿದ್ದಿರುವುದನ್ನು ಅಲ್ಲಿಯೇ ಇದ್ದ ಸ್ಥಳೀಯರು ಸೆರೆಹಿಡಿರುವ ವೀಡಿಯೊದಲ್ಲಿ ಸೆರೆಯಾಗಿದೆ. ಸ್ವಲ್ಪ ಸಮಯದ ನಂತರ ಕಾರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಒಬ್ಬ ಅಧಿಕಾರಿ ಕೆಳಗೆ ಬಿದ್ದಿದ್ದಾರೆ. ಗಾಯಗೊಂಡ ಅಧಿಕಾರಿಗಳನ್ನು ಈಗಾಗಲೇ ಪಿಸಿಆರ್ ವ್ಯಾನ್ ಮೂಲಕ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. 

Related Articles

Back to top button