Latest

ಹೊಸ ವರ್ಷವೆಂದರೆ ಹೊಸ ಬದುಕಿನತ್ತ ಹೆಜ್ಜೆ ಹಾಕುವ ಹೊತ್ತು

ಹೊಸ ವರ್ಷ ಬರುವುದು, ಹಳೆಯ ವರ್ಷ ಹೋಗುವುದು ಸೃಷ್ಟಿಯ ನಿಯಮವಾಗಿದೆ. ಹಳೆ ವರ್ಷದ ಅನೇಕ ಘಟನಾವಳಿಗಳನ್ನು ಮರೆತು ನಾವು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತೇವೆ. ಹೊಸ ವರ್ಷದ ಮೊದಲನೆಯ ದಿನ ಅದೇ ಸೂರ್ಯ, ಚಂದಿರ ತಾರೆಗಳು, ಅದೇ ಭೂಮಿ, ಆಕಾಶ, ಜಲ, ವಾಯು ಮುಂತಾದ ಪಂಚತತ್ವಗಳು ತಮ್ಮ ಸೇವೆಯಲ್ಲಿ ನಿರತವಾಗಿರುತ್ತವೆ. ಕೇವಲ ಮಾನವನಿಗೆ ಮಾತ್ರ ಹೊಸ ವರ್ಷದ ಸಂಭ್ರಮ. ಕೆಲವರು ಕುಡಿದು, ಕುಣಿದು, ಕುಪ್ಪಳಿಸಿ ಸಂಭ್ರಮದಿಂದ ಆಚರಿಸಿದರೆ, ಅನೇಕರು ಭಯ-ಭಕ್ತಿ ಭಾವನೆಗಳಿಂದ ಆಚರಿಸುವುದು ಪರಿಪಾಠವಾಗಿದೆ. ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ದೇಶ ವಿದೇಶಗಳಲ್ಲಿ ಹೊಸ ವರ್ಷದ ಆಚರಣೆ ನಡೆಯುತ್ತದೆ.

ಹೊಸ ವರ್ಷ ಕೇವಲ ಕ್ಯಾಲೆಂಡರ್ ಬದಲಾಯಿಸುವ ಕ್ಷಣವಲ್ಲ, ಹೊಸ ಬದುಕಿನತ್ತ ಹೆಜ್ಜೆ ಹಾಕುವ ಹೊತ್ತು ಕೂಡಾ ಹೌದು. ನಮಗೆ ಅದೇ 365 ದಿನಗಳು ಸಿಗುತ್ತವೆ. ಈ ದಿನಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿಂತಿರುತ್ತದೆ. ಕಳೆದ ವರ್ಷದ ಕಡೆಗೆ ಒಮ್ಮೆ ಹಿಂತಿರುಗಿ ನೋಡಿ ಅವಲೋಕನ ಮಾಡಿಕೊಳ್ಳುವುದು ಕೂಡಾ ಮುಖ್ಯ. ಈ ಸಿಂಹಾವಲೋಕನ ಕಳೆದ ವರ್ಷದ ನಮ್ಮ ತಪ್ಪುಗಳನ್ನು ಅರಿತುಕೊಳ್ಳಲು ಮತ್ತು ತಿದ್ದಿಕೊಳ್ಳಲು ಅಥವಾ ನಾವು ಭವಿಷ್ಯದಲ್ಲಿ ಇಡಬೇಕಾದ ಹೆಜ್ಜೆಗೆ ದಾರಿಯನ್ನು ತೋರಿಸುತ್ತದೆ.

ಭಾರತ ದೇಶದೆಲ್ಲಡೆ ನವವರ್ಷದ ಆಗಮನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ದೇವಾಲಯ, ಪ್ರಾರ್ಥನಾ ಮಂದಿರ ಮತ್ತು ಕ್ರೈಸ್ತ ದೇವಾಲಯಗಳಲ್ಲಿ ವಿಶೇಷವಾಗಿ ಹೊಸ ವರ್ಷದ ಆಚರಣೆ ನಡೆಯುತ್ತದೆ. ಹಾಗೆ ನೋಡಿದರೆ ಕಳೆದು ಹೋದ ಸಮಯ, ಬಾಯಿಂದ ಬಂದ ಮಾತು, ಬಂದೂಕಿನಿಂದ ಹೊರಟ ಬುಲೆಟ್ ಎಂದಿಗೂ ಮರಳಿ ಬರುವುದಿಲ್ಲ. ಇದೇ ರೀತಿ ಕಳೆದುಹೊದ ವರ್ಷ ಮತ್ತೆ ಬರಲಾರದು.

ಪ್ರಕೃತಿ ತಮೋಪ್ರಧಾನವಾಗಿರುವುದರಿಂದ ಹೊಸ ವರ್ಷದಲ್ಲಿ ಹೊಸ ಕಾಯಿಲೆಗಳು ಬರುವುದು ಖಚಿತವಾಗಿದೆ. ನಮ್ಮ ದಿನದ ಆರಂಭ ಶುಭವಾದರೆ, ಇಡೀ ದಿನವು ಸುಖವಾಗಿರುತ್ತದೆ. ಹಾಗೆಯೇ ಹೊಸ ವರ್ಷದ ಆರಂಭ ಸುಖಕರವಾದರೆ ಇಡೀ ವರ್ಷ ಒಳ್ಳೆಯದೇ ಆಗುತ್ತದೆ. ಮನೋವಿಜ್ಞಾನಿಗಳ ಪ್ರಕಾರ ಯಾವುದೇ ವಿಚಾರವನ್ನು ಬಾರಿ-ಬಾರಿಗೂ ಮಾಡಿದರೆ ಅದರ ಶಕ್ತಿ ಹೆಚ್ಚಾಗುತ್ತದೆ. ಪ್ರತಿಯೊಂದು ಸಂಕಲ್ಪದಲ್ಲಿ ಅಗಾಧ ಶಕ್ತಿ ಅಡಗಿದೆ. ಶುದ್ಧ ಸಂಕಲ್ಪಗಳಿಂದ ಸಕಾರಾತ್ಮಕ ಶಕ್ತಿ ಮತ್ತು ಅಶುದ್ಧ ಸಂಕಲ್ಪಗಳಿಂದ ನಕಾರತ್ಮ ಶಕ್ತಿ ಉತ್ಪನ್ನವಾಗುತ್ತದೆ. ಆದ್ದರಿಂದ ನಕಾರಾತ್ನಕ ವಿಚಾರಗಳನ್ನು ಬಿಟ್ಟು, ಆರೋಗ್ಯವಂತರಾಗಲು ಸುವಿಚಾರ, ಧ್ಯಾನ, ಯೋಗಾಸನ, ವ್ಯಾಯಾಮ, ಶುದ್ಧ ಆಹಾರ ಮತ್ತು ವಿಹಾರದ ಅವಶ್ಯಕತೆ ಇದೆ. ಸರ್ವರ ರಕ್ಷಕನಾದ ಪರಮಾತ್ಮನ ಅತಿ ಶ್ರ್ರೇಷ್ಠ ಸಂತಾನರಾದ ನಾವುಗಳು ಅವನಿಂದ ಸರ್ವಶಕ್ತಿಗಳನ್ನು ಪಡೆಯಬೇಕಾಗಿದೆ. ಅದಕ್ಕಾಗಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕಲಿಸುವ ರಾಜಯೋಗ ರಾಮಬಾಣವಾಗಿದೆ. ದಿನಕ್ಕೆ 3-4 ಬಾರಿ ಮನಸ್ಸಿನಲ್ಲಿ ಈ ಶ್ರೇಷ್ಠ ವಿಚಾರಗಳನ್ನು ಮಾಡಿದರೆ ನಮ್ಮ ರಕ್ಷಣೆಯೊಂದಿಗೆ ವಿಶ್ವದ ರಕ್ಷಣೆಯೂ ಸಹ ಆಗುವುದು.

“ನಾನು ಆರೋಗ್ಯವಂತನಾಗಿದ್ದೇನೆ, ನನ್ನ ಪರಿವಾರ ಆರೋಗ್ಯವಾಗಿದೆ, ನನ್ನ ಮನೆ ನಿರೋಗಿಯಾಗಿದೆ, ನನ್ನ ಓಣಿ, ಊರು, ಜಿಲ್ಲೆ, ರಾಜ್ಯ, ದೇಶ, ಜಗತ್ತು ಸದೃಢವಾಗಿದೆ. ಪರಮಾತ್ಮನ ರಕ್ಷಾ-ಕವಚದಲ್ಲಿ ನಾವುಗಳು ನಿರ್ಭಯ, ಸುಖಿ, ಆರೋಗ್ಯವಂತರಾಗಿದ್ದೇವೆ.”

ಈಶ್ವರೀಯ ವಿಶ್ವವಿದ್ಯಾಯದ 8500 ಸೇವಾಕೇಂದ್ರಗಳಲ್ಲಿ ಹೊಸ ವರ್ಷದ ಆಚರಣೆಯನ್ನು ಹಷೋಲ್ಲಾಸದಿಂದ ಪರಮಾತ್ಮನ ಸ್ಮೃತಿಯಲ್ಲಿ ಆಚರಿಸುತ್ತಾರೆ. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಯೋಗ-ತಪಸ್ಸು, ಆಧ್ಯಾತ್ಮಿಕ ಉನ್ನತಿಗಾಗಿ ತರಗತಿ, ಪರಸ್ಪರ ಸ್ನೇಹ-ಪ್ರೀತಿಯಿಂದ ನವ ವರ್ಷವನ್ನು ಸ್ವಾಗತಿಸುತ್ತಾರೆ. ಅಂದು ಸರ್ವ ಸಹೋದರ ಸಹೋದರಿಯರಿಂದ ಹೊಸ ವರ್ಷದ ನಿಮಿತ್ತ ಪ್ರತಿಜ್ಷೆ ಮಾಡಲಾಗುತ್ತದೆ.

*ನಾನು ಹಿಂದೆ ನಡೆದಿರುವ ಕಹಿ ಘಟನೆಗಳನ್ನು ಮರೆತು ಹೊಸ ಜೀವನ ನಡೆಸುತ್ತೇನೆ.
*ನಾನು ಇನ್ನು ಮುಂದೆ ಸಮಯವನ್ನು ಹಾಳು ಮಾಡದೇ ಒಳ್ಳೆಯ ಕಾರ್ಯಗಳನ್ನು ಮಾಡುತ್ತೇನೆ.
*ದುಶ್ಚಟ ಮತ್ತು ದುರ್ಗುಣಗಳನ್ನು ಬಿಟ್ಟು ಹೊಸದಾದ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತೇನೆ.
*ನಾನು ಇನ್ನು ಮುಂದೆ ಯಾರಿಗೂ ಮನಸಾ-ವಾಚಾ-ಕರ್ಮಣ ದು:ಖವನ್ನು ಕೊಡುವುದಿಲ್ಲ ಮತ್ತು ಯಾರಿಂದಲೂ ದು:ಖಿಯಾಗುವುದಿಲ್ಲ.
*ನಾನು ಇನ್ನು ಮುಂದೆ ಸತ್ಯವನ್ನು ನುಡಿಯುತ್ತೇನೆ. ಸುಳ್ಳಿನ ಸಹವಾಸ ಮಾಡುವುದಿಲ್ಲ.
*ನಾನು ಯಾರಿಗೂ ಮೋಸ ಮಾಡುವುದಿಲ್ಲ.
*ನಾನು ಇನ್ನು ಮಂದೆ ಸಿನೆಮಾ ಮತ್ತು ಟಿ.ವಿ.ಯಲ್ಲಿ ಅಶ್ಲೀಲ ಹಾಗೂ ಹಿಂಸಾತ್ಮಕ ದೃಶ್ಯಗಳನ್ನು ನೋಡುವುದಿಲ್ಲ. ಅಶ್ಲೀಲ ಹಿಂಸಾತ್ಮಕ ಕಥೆ-ಕಾದಂಬರಿಗಳನ್ನು ಓದುವುದಿಲ್ಲ.
*ನಾನು ಸದಾ ಸ್ವಚ್ಛವಾಗಿದ್ದು ಪರಿಸರದ ಸ್ವಚ್ಛತೆಯನ್ನು ಕಾಪಾಡುತ್ತೇನೆ.
*ಎಲ್ಲರಿಗೂ ಸರ್ವ ಆತ್ಮರ ತಂದೆಯಾದ ಭಗವಂತನ ಪರಿಚಯವನ್ನು ನೀಡಿ ಅವನ ಜೊತೆ ಸಂಬಂಧವನ್ನು ಬೆಸೆಯುತ್ತೇನೆ.
*ಸರ್ವರಿಗೂ ಭಗವಂತನಿಂದ ಪಡೆದಿರುವ ಶಕ್ತಿಗಳಾದ ಶಾಂತಿ, ಆನಂದ, ನೆಮ್ಮದಿ, ಸುಖ, ದಯೆ, ಕರುಣೆ, ಪ್ರೀತಿ, ಸ್ನೇಹವನ್ನು ಹಂಚಿ, ಆರೋಗ್ಯ ಮತ್ತು ಸಂಪತ್ತನ್ನು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಲಭಿಸಲಿ ಎಂದು ಶುಭ ಹಾರೈಸುತ್ತನೆ.
*ಸದಾ ಭಗವಂತನ ಮಗುವಾಗಿ ಅವನ ಧ್ಯಾನದಲ್ಲಿ ಇದ್ದು ಶ್ರೇಷ್ಠನಾಗಲು ಪ್ರಯತ್ನ ಮಾಡುತ್ತೇನೆ.

ಭಗವಂತ ನೀಡುವ ಜ್ಷಾನದ ಪ್ರಕಾರ ಈ ಸಮಯವು ಸೃಷ್ಟಿ ನಾಟಕದ ಅಂತಿಮ ಸಮಯವಾಗಿದೆ. ಭವಿಷ್ಯದಲ್ಲಿ ದೇವತಾ ಶ್ರೀಕೃಷ್ಣನು ಬರಲಿದ್ದಾನೆ.
ಈಗ ಹೊಸ ವರ್ಷ ಮಾತ್ರವಲ್ಲದೇ ಹೊಸ ಯುಗವು ಬರಲಿದೆ. ನಾವೆಲ್ಲರೂ ಈ ವಿಚಾರವನ್ನು ತಿಳಿದು, ಪರಮಾತ್ಮನಿಂದ ಸರ್ವಪ್ರಾಪ್ತಿಗಳನ್ನು ಪಡೆದುಕೊಳ್ಳೋಣ. ಹೊಸ ವರ್ಷದ ಜೊತೆಗೆ ಸತ್ಯಯುಗವು ಬೇಗನೇ ಬರಲೆಂದು ಶುಭ ಹಾರೈಸೋಣ.


– ಬ್ರ.ಕು.ವಿಶ್ವಾಸ ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
9483937106.

 

 

 

 

 

 

ಅಪಘಾತದಲ್ಲಿ ರಿಷಭ್ ಪಂತ್ ಗೆ ಗಾಯ; ಸಂಪೂರ್ಣ ಸುಟ್ಟು ಕರಕಲಾದ ಕಾರು

https://pragati.taskdun.com/rishabh-pant-injured-in-accident-a-completely-burnt-car/

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್ ನಿಧನ

https://pragati.taskdun.com/prime-minister-narendra-modis-mother-heera-ben-passed-away/

ಹೊರಟ್ಟಿಯವರೇ ನಿಮಗೆ ಶಿಕ್ಷಕರ ನೋವು ಗೊತ್ತಲ್ವಾ?: OPS ಪರ ಗಟ್ಟಿ ಧ್ವನಿ ಎತ್ತಿದ ಪ್ರಕಾಶ ಹುಕ್ಕೇರಿ

https://pragati.taskdun.com/horattiji-you-know-the-pain-of-teachers-prakash-hukkeri-raised-his-voice-in-favor-of-ops/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button