ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನ ಭಯಾನಕ ರೀತಿಯಲ್ಲಿ ಮಳೆ ಆರ್ಭಟಿಸಿತು.
ಮಧ್ಯಾಹ್ನ 2.30ರ ಹೊತ್ತಿಗೆ ದಟ್ಟವಾಗಿ ಮೋಡ ಕವಿದು ಗುಡುಗು, ಮಿಂಚು ಆರಂಭವಾಯಿತು. ಕೆಲವೇ ಕ್ಷಣಗಳಲ್ಲಿ ಮಳೆಯೂ ಆರ್ಭಟಿಸಿತು. ಜೋರಾದ ಸಿಡಿಲಿನ ಶಬ್ಧದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿಯಿತು. ನಂತರವೂ ಬಿಟ್ಟು ಬಿಟ್ಟು ಮಳೆ ಬೀಳುತ್ತಲೇ ಇದೆ.
ಬೆಳಗಾವಿ ದಕ್ಷಿಣ ಭಾಗದಲ್ಲಿ ಮಳೆ ಎಷ್ಟು ಜೋರಾಗಿತ್ತೆಂದರೆ ರಸ್ತೆಯಲ್ಲ ನಿರ್ಜನವಾಗಿ, ಕೆಲ ಹೊತ್ತು ಭಯದ ವಾತಾವರಣ ನಿರ್ಮಿಸಿತು. ಏನು ಅನಾಹುತ ಸೃಷ್ಟಿಸಲಿದೆಯೋ ಎಂದು ಜನರು ಕಂಗೆಟ್ಟು ಕುಳಿತುಕೊಳ್ಳುವಂತೆ ಮಾಡಿತು. ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರವೂ ಕಷ್ಟವಾಯಿತು. ಅನೇಕ ಕಡೆ ಗಿಡದ ರೆಂಬೆಗಳು ಧರೆಗುರುಳಿದವು.
4 ದಿನಗಳ ಹಿಂದೆ ಇಂತದ್ದೇ ಮಳೆ ಸುರಿದು ಎಲ್ಲೆಡೆ ಸಂಚಾರಕ್ಕೆ ಸಂಚಕಾರ ತಂದಿತ್ತು. ರಸ್ತೆಗಳೆಲ್ಲ ನೀರು ಮತ್ತು ಮರದ ರೆಂಬೆ ಕೊಂಬೆಗಳಿಂದ ಆವರಿಸಿತ್ತು. ಇಂದೂ ಅಂತದ್ದೇ ವಾತಾವರಣ ನಿರ್ಮಾಣವಾಯಿತು. ಈಗಲೂ ಮಳೆ ಬಿಟ್ಟು ಬಿಟ್ಟು ಮುಂದುವರಿದಿದೆ.
ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರಿ ಮಳೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ