Kannada NewsKarnataka NewsNational

ದರ್ಗಾ ಮೇಲೆ ಅರೇಬಿಕ್ ಅಕ್ಷರವುಳ್ಳ ತ್ರಿವರ್ಣ ದ್ವಜ: ಇಬ್ಬರು ಅರೆಸ್ಟ್

ಪ್ರಗತಿವಾಹಿನಿ ಸುದ್ದಿ : ದರ್ಗಾ ಮೇಲೆ ಅರೇಬಿಕ್ ಅಕ್ಷರವುಳ್ಳ ತ್ರಿವರ್ಣ ದ್ವಜ ಹಾಕಿದ ಹಿನ್ನಲೆ ಸ್ಥಳೀಯ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಬಿಬಿ ಫಾತಿಮಾ ದರ್ಗಾದಲ್ಲಿ ನಡೆದಿದೆ.

ಯಲಬುರ್ಗಾ ಪಟ್ಟಣದ ಮಹಮ್ಮದ್ ದಾನೀಶ್ ಕುತುಬುದ್ದೀನ್ ಖಾಜಿ ಹಾಗೂ ಅವರ ಸಹೋದರ ಮಹ್ಮದ್ ಆದಿನಾನ್ ಖಾಜಿ ಮೇಲೆ ಸ್ಥಳೀಯ ಪೊಲೀಸರು ಬಂಧಿಸಿ ಎಫ್‌ಐಆ‌ರ್ ದಾಖಲಿಸಿದ್ದಾರೆ..

ಈದ್ ಮಿಲಾದ್ ಆಚರಣೆ ವೇಳೆ ಬಟ್ಟೆಯಿಂದ ತ್ರಿವರ್ಣ ಧ್ವಜ ಹೊಲಿದು ಬಿಳಿಬಣ್ಣದ ಜಾಗದಲ್ಲಿ ಅಶೋಕ ಚಕ್ರದ ಬದಲಿಗೆ ಅರೇಬಿಕ್ ಅಕ್ಷರದಲ್ಲಿ ಲಾ ಇಲ್ಲಾಹ ಇಲ್ಲಾಲ್ಲಾ ಮೊಹಮದ್‌ ರಸೂಲಲ್ಲಾ ಎಂದು ಬರೆಯಲಾಗಿತ್ತು.

ಆರೋಪಿಗಳು ಭಾರತದ ರಾಷ್ಟ್ರಧ್ವಜವನ್ನು ಅಪಮಾನ ಹಾಗೂ ವಿರೂಪಗೊಳಿಸುವ ಉದ್ದೇಶದಿಂದ ದರ್ಗಾ ಮೇಲೆ ಧ್ವಜ ಹಾರಿಸಿದ್ದಾಗಿ ಗೊತ್ತಾಗಿದೆ. ಮದೀನಾ ಮಸೀದಿಯ ಚಿತ್ರವನ್ನು ಸಹ ಧ್ವಜದ ಮೇಲೆ ಚಿತ್ರಿಸಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button