Belagavi NewsBelgaum News
*ಎರಡು ಬೈಕ್ ಗಳ ನಡುವೆ ಡಿಕ್ಕಿ: ವೈದ್ಯ ಸ್ಥಳದಲ್ಲೇ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ನಾಗರಮುನ್ನೋಳಿ ಸಮೀಪದ ಬೆಲ್ಲದ ಬಾಗೇವಾಡಿ ಹಾಗೂ ಜಾಗನೂರ ಮಧ್ಯೆ ರಸ್ತೆ ಅಪಘಾತದಲ್ಲಿ ವೈದ್ಯರೊಬ್ಬರು ಮೃತ ಪಟ್ಟಿರುವ ಘಟನೆ ನಡೆದಿದೆ.
ಭಾನುವಾರ ಸಂಜೆ ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ನಾಗರಮುನ್ನೋಳಿ ಗ್ರಾಮದ ವೈದ್ಯ ಡಾ.ಸಿದ್ರಾಮ್. ರಾಮಪ್ಪಾ.ಚೌಗಲಾ (43) ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಹುಕ್ಕೇರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಸಿದ್ರಾಮ ರಾಮಪ್ಪಾ ಚೌಗಲಾ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೇ ಇಂದು ಬೆಳಿಗ್ಗೆ ನೆರವೇರಿದೆ.


