Karnataka News

*ಉದ್ಯೋಗ ಸಿಕ್ಕಿಲ್ಲ ಎಂದು ಕಂಡಕ್ಟರ್ ಗೆ ಚಾಕು ಇರಿದ ಯುವಕ*

ಪ್ರಗತಿವಾಹಿನಿ ಸುದ್ದಿ: ಎಲ್ಲಿಯೂ ಕೆಲಸ ಸಿಗಲಿಲ್ಲ.‌ ನನಗೆ ಹೊರಗೆ ಇಲರಲು ಇಷ್ಟ ಇಲ್ಲ, ಜೈಲಿನಲ್ಲಿ ಇರುತ್ತೇನೆ ಎಂದು ಯೂವಕನೋರ್ವ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ನಡೆದಿದೆ.

ಎಷ್ಟು ಹುಡುಕಿದರೂ ಕೆಲಸ ಸಿಗದ ಹಿನ್ನಲೆ  ಬಿಎಂಟಿಸಿ ನಿರ್ವಾಹಕರಿಗೆ ಚಾಕು ಇರಿದು ಜೈಲಿಗೆ ಹೋಗಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ನಡೆದಿದೆ.

Home add -Advt

ಸೆ.1 ರಂದು ಸಂಜೆಯ ವೇಳೆ ವೈಟ್‌ಫೀಲ್ಡ್ ಬಳಿಯ KA- 57-F0015 ವೋಲ್ಲೋ ಬಸ್ ಕಂಡಕ್ಟ‌ರ್ ಯೋಗೇಶ್ ಅವರಿಗೆ ಯುವಕ ಎರಡು ಮೂರು ಬಾರಿ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ.

ಡಿಪೋ-13ರ ವೋಲ್ಲೋ ಬಸ್‌ನಲ್ಲಿ ಈ ಘಟನೆ ನಡೆದಿದ್ದು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಅಕ್ಷರಶಃ ಹುಚ್ಚನಂತೆ ವರ್ತಿಸಿದ್ದಾನೆ ಕಂಡಕ್ಟರ್‌ಗೆ ಎರಡು ಮೂರು ಬಾರಿ ಚಾಕುವಿನಿಂದ ಇರಿದಿದ್ದಲ್ಲದೆ, ಬಸ್‌ನಲ್ಲಿದ್ದ ಸುತ್ತಿಗೆಯಿಂದ ಬಸ್ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾನೆ.

ಸದ್ಯ ಆರೋಪಿಯನ್ನು ವೈಟ್ ಫೀಲ್ಡ್ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಎಲ್ಲೂ ಕೆಲಸ ಸಿಗದ ಹಿನ್ನಲೆ ನನಗೆ ಹೊರಗೆ ಇರಲು ಆಗುವುದಿಲ್ಲ.. ಜೈಲಿಗೆ ಹೋಗಲು ಈ ರೀತಿ ಮಾಡಿದ್ದೇನೆ ಎಂದು ಆರೋಪಿ ತಪ್ರೊಪ್ಪಿಕೊಂಡಿದ್ದಾನೆ. ಇನ್ನು ಬಿಎಂಟಿಸಿ ಬಸ್ ನಿರ್ವಾಹಕ ಯೋಗೇಶ್ ಗಂಭೀರ ಗಾಯಗೊಂಡಿದ್ದು, ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button