Cancer Hospital 2
Beereshwara 36
LaxmiTai 5

*ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಗುರಾಯಿಸಿದ್ದಕ್ಕೆ ಯುವಕನ ಹತ್ಯೆ ಮಾಡಿರುವ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದ ಲಾಲ್ ಮಸೀದಿ ಬಳಿ ನಡೆದಿದೆ. 

Emergency Service

ಅರ್ಬಾಜ್ ಖಾನ್ (18) ಕೊಲೆಯಾದ ಯುವಕ. ಅರ್ಬಾಜ್ ಗುರಾಯಿಸಿದ ಎನ್ನುವ ಕಾರಣಕ್ಕೆ ಯುವಕರ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ನಾಲ್ವರು ಆರೋಪಿಗಳು ಮಾರಾಕಾಸ್ತ್ರಗಳಿಂದ ಅರ್ಬಾಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಯುವಕನ ಸಾವಿನ ಕೊನೆ ಕ್ಷಣದ ವಿಡಿಯೋಗಳು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಗಲಾಟೆಯಲ್ಲಿ ಕುತ್ತಿಗೆ ಸೀಳಿದ ಕಾರಣ ಅರ್ಬಾಜ್ ನಡುರಸ್ತೆಯಲ್ಲೇ ಒದ್ದಾಡುತ್ತಿದ್ದ. ಪೊಲೀಸರು ಕೂಡಲೇ ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದ ಅರ್ಬಾಜ್ ಮೃತಪಟ್ಟಿದ್ದಾನೆ. ಗಲಾಟೆಯಲ್ಲಿ ಆರೋಪಿ ಶಹಬಾಜ್ ಎಂಬಾತನಿಗೆ ಗಾಯವಾಗಿದೆ. ಈ ಪ್ರಕರಣದ ಕುರಿತು ಉದಯಗಿರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Bottom Add3
Bottom Ad 2