Kannada NewsKarnataka NewsLatest
ಬೈಕ್ ಸಹಿತ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಯುವಕ ಅದೃಷ್ಟವಶಾತ್ ಪಾರು; ಬೈಕ್ ನೀರುಪಾಲು
ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಭಾರೀ ಮಳೆಯಿಂದಾಗಿ ಬೈಲಹೊಂಗಲ-ಬೆಳಗಾವಿ ರಸ್ತೆ ಸಾಣಿಕೊಪ್ಪ ಗ್ರಾಮದ ಬಳಿ ಭಾರಿ ಮಳೆಯಿಂದ ಹಳ್ಳ ಉಕ್ಕಿ ಹರಿದು ಸಂಚಾರ ಸ್ಥಗಿತಗೊಂಡಿದೆ.
ಇದೇ ವೇಳೆ ಸಿದ್ದಸಮುದ್ರ ನಿವಾಸಿ ಪುಟ್ಟೇಶ್ ಬಸಪ್ಪ ಜಡೆಯಣ್ಣನವರ್ (24) ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬೈಕ್ ಸಹಿತ ಕೊಚ್ಚಿಹೋಗಿದ್ದು ಅದೃಷ್ಟವಶಾತ್ ಬಚಾವಾಗಿದ್ದಾರೆ. ಆದರೆ ಬೈಕ್ ಹಳ್ಳದಲ್ಲಿ ಕೊಚ್ಚಿ ಹೋಗಿದೆ.
ಇಂತಹ ಅವಘಡಗಳನ್ನು ತಪ್ಪಿಸಲು ರಾತ್ರಿಯಿಡೀ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದೀಗ ಸಂಚಾರ ಸಾಮಾನ್ಯವಾಗಿದ್ದು, ಸಿಬ್ಬಂದಿ ನಿಯೋಜನೆ ಮುಂದುವರಿಸಲಾಗಿದೆ.
ಜಿಲ್ಲೆಯ ಸದಲಗಾ ವ್ಯಾಪ್ತಿಯ ಮಲಿಕ್ವಾಡ – ದತ್ತವಾಡ ಸೇತುವೆ ಮುಳುಗಡೆ ಯಾಗಿದ್ದು ಸಂಚಾರ ಸ್ಥಗಿತಗೊಂಡಿದೆ. ಕುನ್ನೂರ- ಬರವಾಡ ಮಧ್ಯದ ಸೇತುವೆಯೂ ಮುಳುಗಡೆಯಾಗಿದ್ದು ಸಂಚಾರ ಸ್ಥಗಿತಗೊಂಡಿದೆ.
ಸಿಡಿಲಿನ ಅಬ್ಬರಕ್ಕೆ ತಂದೆ- ಮಗ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ