Latest

ಕಾರ್ಮಿಕ ಇಲಾಖೆ ಉಪ ಆಯುಕ್ತರ ಮನೆ ಮೇಲೆ ಎಸಿಬಿ ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾರ್ಮಿಕ ಇಲಾಖೆ ಉಪ ಆಯುಕ್ತ ಎ.ಹೆಚ್ ಉಮೇಶ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉಮೇಶ್ ಅವರ ಬೆಂಗಳೂರಿನ ಮನೆ, ಹುಟ್ಟೂರು ರಾಮನಗರದ ಆವರಗೆರೆಯಲ್ಲಿರುವ ಮನೆ ಹಾಗೂ ಆಪ್ತರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ.

Home add -Advt

ಯಶವಂತಪುರ ಉಪ ವಿಭಾಗದ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಎ.ಹೆಚ್ ಉಮೇಶ್, ತನ್ನ ಕುಟುಂಬದ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರವಿಕುಮಾರ್ ಕಂಚನಹಳ್ಳಿ ದೂರಿನ ಮೇಲೆ ರಾಮನಗರ ಎಸಿಬಿ ಕಚೇರಿಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಪತ್ರಕರ್ತರಿಗೆ ಕರ್ಚೀಫ್ ಕೊಟ್ಟು ಗ್ಲೀಸರೀನ್ ಚೆಕ್ ಮಾಡಿ ಎಂದ ಹೆಚ್.ಡಿ.ಕೆ

Related Articles

Back to top button