
ಶಿರಸಿಯಲ್ಲಿ ಘಟನೆ
ಪ್ರಗತಿವಾಹಿನಿ ಸುದ್ದಿ, ಶಿರಸಿ: ಪೆಟ್ರೋಲ್ ಬಂಕ್ ಒಳಗೆ ಬರುತ್ತಿದ್ದ ಕಾರಿನ ಡ್ರೈವರ್ ಬ್ರೇಕ್ ಬದಲಿಗೆ ಎಕ್ಸಿಲೇಟರ್ ಒತ್ತಿದ ಪರಿಣಾಮ, ಎದುರಿಗಿದ್ದ ಬೈಕ್ ಗೆ ಗುದ್ದಿದ ಘಟನೆ ನಗರದ ಅಗ್ರಿಕಲ್ಚರಲ್ ಸೊಸೈಟಿಯ ಪೆಟ್ರೋಲ್ ಬಂಕ್ ನಲ್ಲಿ ಜರುಗಿದೆ.
ಕಾರಿನ ಚಾಲಕಿಯ ಅಚಾತುರ್ಯದಿಂದ ಈ ಘಟನೆ ಸಂಭವಿಸಿದ್ದು, ಬೈಕ್ ನಲ್ಲಿದ್ದ ಸವಾರ, ಹಾಗು ಓರ್ವ ಮಹಿಳೆಗೆ ಗಾಯಗಳಾಗಿವೆ. ಪೆಟ್ರೋಲ್ ಬಂಕಿನ ಮಷಿನ್ ಗೆ ಹಾನಿ ಉಂಟಾಗಿದೆ ಎಂಬ ಮಾಹಿತಿ ದೊರೆತಿದೆ. ಅದೃಷ್ಟವಷಾತ್ ದೊಡ್ಡ ಪ್ರಮಾಣದ ದುರ್ಘಟನೆ ಸಂಭವಿಸಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ