Karnataka News

*ಮೂರು ವಾಹನಗಳ ಮಧ್ಯೆ ಅಪಘಾತ: ಮೂವರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ಬಳಿ ಟಾಟಾ ಏಸ್, ಕಾರು, ಎರಡು ಬೈಕ್ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಮಖಂಡಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದ ಟಾಟಾ ಏಸ್ ವಾಹನಕ್ಕೆ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಈ ವೇಳೆ ಟಾಟಾ ಏಸ್ ನ ಹಿಂಬದಿಯಲ್ಲಿ ಬರುತ್ತಿದ್ದ ಎರಡು ಬೈಕ್ ಗಳು ಡಿಕ್ಕಿಯಾಗಿದೆ. ಕಾರು ಹಾಗೂ ಟಾಟಾ ಏಸ್ ವೇಗವಾಗಿದ್ದರಿಂದ ನಿಯಂತ್ರಣಕ್ಕೆ ಸಿಗದೆ ಮುಖಮುಖಿ ಡಿಕ್ಕಿಯಾಗಿದ್ದು, ಟಾಟಾ ಏಸ್ ನ ಹಿಂಬದಿಯಲ್ಲೆ ಇದ್ದ ಬೈಕ್ ಸವಾರರು ಕೂಡ ಟಾಟಾ ಏಸ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಓರ್ವ, ಟಾಟಾ ಏಸ್ ನಲ್ಲಿದ್ದ ಓರ್ವ ಹಾಗೂ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಮಖಂಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Related Articles

Back to top button