Election NewsNationalPolitics

*ಕೇಜ್ರಿವಾಲ್ ಗೆ ಶಾಕ್: ಆಪ್ ತೋರೆದ 8 ಶಾಸಕರು*

ಪ್ರಗತಿವಾಹಿನಿ ಸುದ್ದಿ: ಮತ್ತೆ ದಿಲ್ಲಿಯ ಅಧಿಕಾರದ ಗದ್ದುಗೆ ಹಿಡಿದು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಅರವಿಂದ್ ಕೇಜ್ರಿವಾಲ್ ಗೆ ದೊಡ್ಡ ಶಾಕ್ ಎದುರಾಗಿದೆ. ಟಿಕೆಟ್ ಸಿಗದೇ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ 8 ಶಾಸಕರು ಎಎಪಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.

ರಾಜೀನಾಮೆ ನೀಡಿದ ಶಾಸಕರ ಪೈಕಿ ನರೇಶ್ ಯಾದವ್‌ (ಮೆಹೌಲಿ), ರೋಹಿತ್ ಕುಮಾ‌ರ್ (ತ್ರಿಲೋಕಪುರಿ), ರಾಜೇಶ್ ರಿಷಿ (ಜನಕ್ಷುರಿ), ಮದನ್ ಲಾಲ್ (ಕಸ್ತೂರ್ಬಾ ನಗರ), ಪವನ್ ಶರ್ಮಾ (ಆದರ್ಶ ನಗರ), ಮತ್ತು ಭಾವನಾ ಗೌಡ್ (ಪಾಲಂ). ಬಿಎಸ್‌ ಜೂನ್ (ಬಿಜ್ವಾಸನ್) ಮತ್ತು ಗಿರೀಶ್ ಸೋನಿ (ಮಾದಿಪು‌ರ್) ಸೇರಿದ್ದಾರೆ.

Home add -Advt

ಪಾಲಂ ಕ್ಷೇತ್ರದ ಭಾವನಾ ಗೌರ್ ತಮ್ಮ ರಾಜೀನಾಮೆ ಪತ್ರದಲ್ಲಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ ಅವರ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿದ್ದು, “ನಿಮ್ಮ ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ಚುನಾವಣೆಗೆ ಎಎಪಿ ತನ್ನ ಐದನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದಾಗ, ನರೇಶ್‌ ಯಾದವ್ ಬದಲಿಗೆ ಮಹೇಂದರ್ ಚೌಧರಿ ಅವರನ್ನು ಎಎಪಿ ತನ್ನ ಮೆಹೌಲಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿತು.

Related Articles

Back to top button