World

*ಶಾಪಿಂಗ್ ಮಾಲ್ ಬಳಿ ಪತನಗೊಂಡ ವಿಮಾನ: 6 ಜನ ಸಾವು*

ಪ್ರಗತಿವಾಹಿನಿ ಸುದ್ದಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಚಿಕಿತ್ಸೆಗೆ ಹೊತ್ತೊಯ್ಯುತ್ತಿದ್ದ ಜೆಟ್ ವಿಮಾನೊಂದು ಅಮೇರಿಕಾದ ಫಿಲಡೆಲ್ಪಿ ಬಳಿ ಪತನಗೊಂಡಿದ್ದು, ಮಗುವಿನ ಜತೆಗಿದ್ದ ಕುಟುಂಬಸ್ಥರು ಸೇರಿ 6 ಜನ ಮೃತಪಟ್ಟಿರುವುದು ವರದಿಯಾಗಿದೆ.

ವಿಮಾನವು ಶಾಪಿಂಗ್‌ಮಾಲ್ ಬಳಿ ಪತನಗೊಂಡ ಕಾರಣ ನರೆಹೊರೆಯಲ್ಲಿ ಭಾರಿ ಪ್ರಮಾಣದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ವೈದ್ಯಕೀಯ ಸಾರಿಗೆ ಕಂಪನಿಯ ಜೆಟ್ ವಿಮಾನವಾಗಿದ್ದು, ಭಾರಿ ಅನಾಹುತದಿಂದ ವಿಮಾದಲಿದ್ದ ಯಾರು ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಸಾಲು ಸಾಲು ಮನೆಗಳ ಮೇಲೆ ವಿಮಾನ ಪತನಾಗಿದ್ದು, ಮನೆಯಲ್ಲಿನ ಸಾವು ನೋವುಗಳ ಬಗ್ಗೆ ಖಚಿತ ಮಾಹಿತಿ ಇಲ್ಲ. ಅನಾಹುತವಾದ ಪ್ರದೇಶಕ್ಕೆ ಕಲ್ಪಿಸುವ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ ಎಂದು ಅಗ್ನಿಶಾಮಕದಳ ಅಧಿಕಾರಗಳು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button