Kannada NewsTravelWorld

*ಭಾರತದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದ ಘೋಷಿಸಿದ ಡೊನಾಲ್ಡ್ ಟ್ರಂಪ್*

ಪ್ರಗತಿವಾಹಿನಿ ಸುದ್ದಿ: ಶೀಘ್ರದಲ್ಲೇ ಭಾರತದೊಂದಿಗೆ ಉತ್ತಮ ಮತ್ತು ಬಹಳ ದೊಡ್ಡ ವ್ಯಾಪಾರ ಒಪ್ಪಂದವನ್ನು ಮಾಡಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಶ್ವೇತಭವನದಲ್ಲಿ ನಡೆದ ಬಿಗ್ ಬ್ಯೂಟಿಫುಲ್ ಈವೆಂಟ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೆ ಚೀನಾದೊಂದಿಗೆ ಉತ್ತಮ ವ್ಯಾಪರ ಮಾಡುತ್ತಿದ್ದೇವೆ. ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದು ಘೋಷಿಸಿದ್ದಾರೆ.

Home add -Advt

ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ವ್ಯಾಪಾರ ಸಂಬಂಧದ ಕುರಿತಂತೆ ಉಭಯ ದೇಶಗಳ ಸಂಧಾನಕಾರ ತಂಡಗಳು ನಾಲ್ಕು ದಿನಗಳ ಕಾಲ ಸತತ ಚರ್ಚೆ ನಡೆಸಿವೆ. ಈ ಚರ್ಚೆಗಳ ಫಲಿತಾಂಶವಾಗಿ ಶೀಘ್ರದಲ್ಲೇ ಒಪ್ಪಂದ ಜಾರಿಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಅಮೆರಿಕವು ಎಲ್ಲಾ ರಾಷ್ಟ್ರಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ಕೇವಲ ಆಯ್ದ ಪ್ರಮುಖ ದೇಶಗಳೊಂದಿಗೆ ಮಾತ್ರ ನಾವು ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದ್ದೇವೆ. ಚೀನಾದೊಂದಿಗೆ ಇಂತಹ ಒಪ್ಪಂದಕ್ಕೆ ಬರಲಾಗಿದ್ದು, ಮುಂದಿನ ಸರದಿ ಭಾರತದ್ದಾಗಿದೆ.

ಪ್ರತಿಯೊಬ್ಬರೂ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ನಾವು ಈಗಾಗಲೇ ಚೀನಾದೊಂದಿಗೆ ಒಪ್ಪಂದ ಮಾಡಿದ್ದೇವೆ. ಇನ್ನೂ ಕೆಲವು ಉತ್ತಮ ಒಪ್ಪಂದಗಳಿವೆ. ಆದರೆ ಬಹುಶಃ ಭಾರತದೊಂದಿಗೆ ನಾವು ಅತ್ಯಂತ ದೊಡ್ಡ ವ್ಯಾಪಾರ ಒಪ್ಪಂದವೊಂದನ್ನು ಮಾಡಲಿದ್ದೇವೆ ಎಂದರು.

Related Articles

Back to top button