Kannada NewsTravelWorld

*ಇಸ್ರೇಲ್-ಇರಾನ್ ಯುದ್ಧದ ನಡುವೆ ಅಮೇರಿಕಾ ಎಂಟ್ರಿ*

ಪ್ರಗತಿವಾಹಿನಿ ಸುದ್ದಿ : ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಈ ಯುದ್ಧದಲ್ಲಿ ಎರಡು ದೇಶಗಳಿಗೆ ಹಾನಿಯಾಗುತ್ತಿದೆ.‌ ಆದರೆ ಇದೀಗ ಇಸ್ರೇಲ್ ಜೊತೆಗೆ ಅಮೇರಿಕಾ ನಿಂತಿದ್ದು, ಯುದ್ಧದ ತೀವ್ರತೆ ಮತ್ತಷ್ಟು ಹೆಚ್ಚಲಿದೆ.‌ ಮೂರನೇ ಮಹಾಯುದ್ಧದ ಭೀತಿ ಎದುರಾಗಿದೆ.

ಇರಾನ್ ನ ಮೂರು ಪರಮಾಣು ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ಈ ಬಗ್ಗೆ ಎಕ್ಸ್ ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. ಇರಾನ್ ನಲ್ಲಿರುವ ಫೋರ್ದೋ, ನತಾಂಜ್ ಮತ್ತು ಎಸ್‌ಫಹಾನ್ ಪರಮಾಣು ನೆಲೆಗಳನ್ನು ಧ್ವಂಸಗೊಳಿಸಲಾಗಿದೆ.

ಪರಮಾಣು ನೆಲೆಯ ಮೇಲೆ ಬಾಂಬ್ ಗಳ ರಾಶಿಯನ್ನು ಸುರಿಯಲಾಗಿದ್ದು, ಪ್ರತಿಯೊಂದು ವಿಮಾನವೂ ಮತ್ತೆ ವಾಪಸ್ ಮರಳಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button