Kannada NewsKarnataka NewsLatest

*ವಕೀಲರು-ಪೊಲೀಸರ ಸಂಘರ್ಷ: ಕಾನೂನು ಸುವ್ಯವಸ್ಥೆ ಹದಗೆಟ್ಟು ಗೃಹ ಇಲಾಖೆ ಮೇಲೆ ಸರ್ಕಾರದ ನಿಯಂತ್ರ ತಪ್ಪಿದೆ; ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಪೋಲಿಸರೇ ಪ್ರತಿಭಟನೆ ಮಾಡುತ್ರಿದ್ದು, ವಕೀಲರೂ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ವಕೀಲರು ಮತ್ತು ಪೊಲೀಸರ ನಡುವೆ ಸಂಘರ್ಷ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಗೃಹ ಇಲಾಖೆ ಮೇಲೆ ಸರ್ಕಾರ ಮತ್ತು ಅಧಿಕಾರಿಗಳ ನಿಯಂತ್ರಣ ತಪ್ಪಿದೆ ಎಂದು ಮಾಜಿ ಸಿಎ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಇಲಾಖೆಯು ಈ ರೀತಿ ಅಶಿಸ್ತು ತೋರುತ್ತಿರುವುದು ಒಂದು ಗಂಭೀರವಾದ ವಿಚಾರ, ಸರ್ಕಾರ ಈ ಕೂಡಲೇ ಇದನ್ನು ಸರಿಪಡಿಸದಿದ್ದರೆ ರಾಜ್ಯದಲ್ಲಿ ಉಂಟಾಗುವ ಅರಾಜಕತೆಗೆ ಕಾರಣವಾಗುತ್ತೆ‌ ಎಂದು ಹೇಳಿದ್ದಾರೆ.

Home add -Advt

ಮುಖ್ಯಮಂತ್ರಿಗಳು ಈ ಕೂಡಲೇ ಮಧ್ಯ ಪ್ರವೇಶಿಸಿ ಕಾನೂನು ಎಲ್ಲರೂ ಪಾಲಿಸಬೇಕು ಅನ್ನುವ ವಾತಾವರಣ ಮೂಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.


Related Articles

Back to top button