Karnataka NewsLatest

*ಹುಟ್ಟುಹಬ್ಬದ ದಿನವೇ ಭೀಕರ ಅಪಘಾತ: ಮೂವರು ವಿದ್ಯಾರ್ಥಿಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಹುಟ್ಟುಹಬ್ಬ ಆಚರಿಸಿ ವಾಪಾಸ್ ಆಗುತ್ತಿದ್ದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ನಡೆದಿದೆ.

ಸುಜಿತ್, ರೋಹಿತ್, ಹರ್ಷ ಮೃತ ವಿದ್ಯಾರ್ಥಿಗಳು. ಮೂವರು ಜಿಕೆವಿಕೆಯಲ್ಲಿ ಬಿಎಸ್ ಸಿ ವ್ಯಾಸಂಗ ಮಾಡುತ್ತಿದ್ದರು.

Home add -Advt

ಸುಜಿತ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಭರ್ಜರಿ ಜನ್ಮದಿನ ಆಚರಣೆ ಬಳಿಕ ಐವರು ವಿದ್ಯಾರ್ಥಿಗಳು ಎರಡು ಬೈಕ್ ಗಳಲ್ಲಿ ಏರ್ ಪೋರ್ಟ್ ರಸ್ತೆಯಲ್ಲಿ ಲಾಂಗ್ ಡ್ರೈವ್ ಹೋಗಿದ್ದರು. ವಾಪಾಸ್ ಆಗುತ್ತಿದ್ದಾಗ ಬೈಕ್ ಹಾಗೂ ಗೂಡ್ಸ್ ನಡುವೆ ಡಿಕ್ಕಿಯಾಗಿದೆ. ಅಪಘತದ ರಭಸಕ್ಕೆ ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

ಚಿಕ್ಕಜಾಲ ಸಂಚಾರಿ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Related Articles

Back to top button