Kannada NewsKarnataka NewsLatest

*ಮನೆಯವರಿಂದಲೇ ಯುವತಿಗೆ ಗೃಹ ಬಂಧನ; ಪ್ರಾಣಕ್ಕೆ ಕುತ್ತು ತಂದ ಕುಟುಂಬದವರು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುವತಿಯೊಬ್ಬರನ್ನು ಕುಟುಂಬದವರೇ 4 ತಿಂಗಳ ಕಾಲ ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಲಗ್ಗೆರೆಯಲ್ಲಿ ಈ ಘಟನೆ ನಡೆದಿದೆ. ಸ್ವಂತ ತಮ್ಮನೇ ಮಮತಾಶ್ರೀ (26) ಎಂಬ ಯುವತಿಯನ್ನು ಗೃಹ ಬಂಧನದಲ್ಲಿಟ್ಟು ಹಿಂಸಿಸಿದ್ದಾನೆ. ಡೋಂಗಿ ಬಾಬಾನ ಮಾತು ಕೇಳಿ ಕುಟುಂಬದವರು ಸ್ವಂತ ಮಗಳಿಗೆ ಈರೀತಿ ಶಿಕ್ಷೆ ನೀಡಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

Home add -Advt

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಗೃಹ ಬಂಧನದಲ್ಲಿದ್ದ ಯುವತಿ ಕಿರುಚುತ್ತಿದ್ದಳು ಈ ವೇಳೆ ಯುವತಿಯ ತಮ್ಮ ಪ್ರಶಾಂತ್ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ. ತನ್ನನ್ನು ಕಾಪಾಡುವಂತೆ ಯುವತಿ ಸಂಬಂಧಿಕರಿಗೆ ಮೆಸೇಜ್ ಕಳುಹಿಸಿದ್ದಾಳೆ. ಈ ವೇಳೆ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮಮತಾಶ್ರೀ ಕುಟುಂಬದವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರು. ಬಿಕಾಂ ಪದವೀಧರೆಯಾಗಿರುವ ಮಮತಾಶ್ರೀ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ನಾಲ್ಕು ತಿಂಗಳ ಹಿಂದೆ ಮಮತಾಶ್ರೀ ಬ್ಯಾಕ್ ಪೇನ್ ನಿಂದ ಬಳಲುತ್ತಿದ್ದರು. ಕುಟುಂಬದವರು ಆಸ್ಪತ್ರೆಗೆ ತೋರಿಸಿದ್ದರು. ಆದರೂ ಗುಣಮುಖವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜ್ಯೋತಿಷಿ ಮೊರೆ ಹೋಗಿದ್ದಾರೆ. ಬಾಬಾ ಅಬ್ದುಲ್ ಎಂಬ ಡೋಂಗಿ ಬಾಬಾ ಮೊರೆ ಹೋದ ಕುಟುಂಬದವರು ಯುವತಿಗೆ ಚಿಕಿತ್ಸೆಯನ್ನೂ ಕೊಡಿಸದೇ ಮನೆಯಲ್ಲಿಯೇ ಕೂಡಿ ಹಾಕಿದ್ದರು. ಊಟವನ್ನೂ ನೀಡದೇ ಕೇವಲ ನಿಂಬೆ ಹಣ್ಣಿನ ನೀರು, ಅರಿಷಿಣ ನೀರು ಕೊಡುತ್ತಿದ್ದರು.

ಒಂದು ತಿಂಗಳ ಹಿಂದೆ ಯುವತಿ ತೀವ್ರ ಅನಾರೋಗ್ಯಕ್ಕೀಡಾಗಿದ್ದಳು. ಈ ವೇಳೆ ಆಸ್ಪತ್ರೆಗೆ ಕರೆದೊಯ್ದಾಗ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಮೊದಲೇ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದರೆ ಗುಣಮುಖಳಾಗುತ್ತಿದ್ದಳು. ಆದರೆ ಮಂತ್ರವಾದಿ ಮಾತು ಕೇಳಿ ಯುವತಿಯ ತಾಯಿ ಹಾಗೂ ತಮ್ಮ ಯುವತಿಯ ಜೀವಕ್ಕೆ ಅಪಾಯತಂದೊಡ್ಡಿದ್ದಾರೆ. ಇದೀಗ ಯುವತಿ ಮನೆಗೆ ಭೇಟಿ ನೀಡಿರುವ ಅಧಿಕಾರಿಗಳು ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


Related Articles

Back to top button