Kannada NewsKarnataka NewsLatest

*ಮೆಡಿಕಲ್ ಸ್ಟೋರ್ ಗೆ ಬಂದ ವ್ಯಕ್ತಿ ಹೃದಯಾಘಾತದಿಂದ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಔಷಧಿ ಖರೀದಿಸಲು ಮೆಡಿಕಲ್ ಸ್ಟೋರ್ ಗೆ ಬಂದಿದ್ದ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು ಹೃದಯಾಘತದಿಂದ ಸಾವನ್ನಪ್ಪಿರುವ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ.

Home add -Advt

ಜಗದೀಶ್ (38) ಮೃತ ವ್ಯಕ್ತಿ. ಜಗದೀಶ್ ಗೆ ಎದೆನೋವು ಕಾಣಿಸಿಕೊಂಡ ಕಾರಣ ಮೆಡಿಕಲ್ ಸ್ಟೋರ್ ಗೆ ಮಾತ್ರೆ ಖರೀದಿಸಲು ಬಂದಿದ್ದರು. ಈ ಹೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಜಗದೀಶ್ ಕ್ಯಾತರಾಮನಹಳ್ಳಿಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದರು. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Related Articles

Back to top button