Kannada NewsKarnataka NewsNationalPolitics

ಅಪರಾಧ ಪ್ರಕರಣದಲ್ಲಿ ಯಾರನ್ನೂ ರಕ್ಷಿಸದೆ ಕ್ರಮಕೈಗೊಳ್ಳಲಾಗಿದೆ: ಪರಮೇಶ್ವರ್‌  

ಪ್ರಗತಿವಾಹಿನಿ ಸುದ್ದಿ: ಹಾಸನದಲ್ಲಿ ನಡೆದಿರುವ ಅಪರಾಧ ಪ್ರಕರಣದಲ್ಲಿ ಯಾರನ್ನೂ ರಕ್ಷಿಸದೇ, ಒತ್ತಡಕ್ಕೆ ಮಣಿಯದೇ ಸರಿಯಾದ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್‌  ಹೇಳಿದ್ದಾರೆ. 

ನಿನ್ನೆ ಹಾಸನದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳೊಡನೆ ಸಭೆ ನಡೆಸಿದ ಕುರಿತು ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದಲ್ಲಿ ಪ್ರಭಾವಿಗಳೇ ಇರುವುದರಿಂದ ಈ ವಿಷಯ ತುಂಬಾ ಸೂಕ್ಷ್ಮವಾಗಿದೆ, ಲೈಂಗಿಕ ಹಗರಣ, ಅತ್ಯಾಚಾರ, ಅಪಹರಣ ಮುಂತಾದ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ ಎಂದರು.

Home add -Advt

ಇಬ್ಬರ ಪ್ರಕರಣದಲ್ಲೂ ಸರಿಯಾದ ತನಿಖೆ ನಡೆಯುತ್ತಿದೆ. ಎಸ್‌ ಐಟಿ ತನಿಖೆ ಬಗ್ಗೆ ಸಂಶಯ ಬೇಡ. ಈ ಪ್ರಕರಣದ ಸಂಬಂಧ ಸರಿಯಾದ ತನಿಖೆ ನಡೆಸಲಾಗುತ್ತೆ. ಯಾರೂ ಭಯ ಪಡುವುದು ಬೇಡ. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ನೀಡಲಾಗುತ್ತೆ ಎಂದು ಪರಮೇಶ್ವರ್‌ ತಿಳಿಸಿದ್ದಾರೆ.

Related Articles

Back to top button