Latest

ಖ್ಯಾತ ಕೊಮೆಡಿಯನ್, ನಟ ರಾಜು ಶ್ರೀವಾಸ್ತವ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಮುಂಬೈ:  ಖ್ಯಾತ ಕೊಮೆಡಿಯನ್ ರಾಜು ಶ್ರೀವಾಸ್ತವ (58) ದೆಹಲಿಯಲ್ಲಿ ಹೃದಯಾಘಾತದಿಂದ ಬುಧವಾರ ನಿಧನರಾದರು.

ಕಳೆದ ಆಗಸ್ಟ್ 10ರಂದು ಜಿಮ್ ನಲ್ಲಿ ತೀವ್ರ ಎದೆನೋವಿನಿಂದ ಏಕಾಏಕಿ ಕುಸಿದು ಬಿದ್ದ ನಂತರ  ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಇಂದು ಕೊನೆಯುಸಿರೆಳೆದರು ಎಂದು ಅವರ ಕುಟುಂಬದವರು ದೃಢಪಡಿಸಿದ್ದಾರೆ.

ಹಲವು ಸಿನೆಮಾಗಳಲ್ಲೂ ನಟಿಸಿದ್ದ ಅವರು ಕಿರುತೆರೆಗಳಲ್ಲಿ ಕೊಮೆಡಿ ಶೋಗಳಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿದ್ದರು. ಜಗತ್ತಿನ ನಾನಾ ಭಾಗಗಳಲ್ಲಿ ಅವರು ಅನೇಕ ಕೊಮೆಡಿ ಶೋಗಳನ್ನು ನಡೆಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ್ದರು.

ಪೇಟ್ ಸಫಾ ಸಹಿತ ಹಲವು ಜಾಹೀರಾತುಗಳಲ್ಲೂ ಅವರು ಮೊಡೆಲ್ ಆಗಿ ಕಾಣಿಸಿಕೊಂಡಿದ್ದರು. ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು, ಬಾಲಿವುಡ್ ಸ್ಟಾರ್ ಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Home add -Advt

‘ದ ಕಾಶ್ಮೀರ್ ಫೈಲ್ಸ್’, RRR ಮೀರಿಸಿದ ಗುಜರಾತಿ ಚಿತ್ರ ‘ಚೆಲ್ಲೋ ಶೋ’

Related Articles

Back to top button