Latest

ಸ್ಯಾಂಡಲ್ ವುಡ್ ನಟ ಚೇತನ್ ನಾಪತ್ತೆ; ಪತ್ನಿ ಕಣ್ಣೀರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಚೇತನ್ ಪತ್ನಿ ಮೇಘಾ ಆತಂಕ ವ್ಯಕ್ತಪಡಿಸಿದ್ದಾರೆ.

ಮಧ್ಯಾಹ್ನದಿಂದ ನಟ ಚೇತನ್ ಕಾಣಿಸುತ್ತಿಲ್ಲ. ಶೇಷಾದ್ರಿಪುರಂ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿರುವ ಬಗ್ಗೆ ಅನುಮಾನವಿದೆ. ಸ್ಥಳೀಯರು ಹೇಳುವ ಪ್ರಕಾರ ಪೊಲೀಸರು ಬಂದು ಅವರನ್ನು ಕರೆದೊಯ್ದಿದ್ದಾರೆ ಎನ್ನುತ್ತಿದ್ದಾರೆ. ಆದರೆ ದೂರು ನೀಡಿದರೆ ಪೊಲೀಸರು ಕೂಡ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ದೂರಿರುವ ನಟ ಚೇತನ್ ಪತ್ನಿ, ತಮ್ಮ ಪತಿ ಚೇತನ್ ಕಾಣಿಸುತ್ತಿಲ್ಲ, ಮಧ್ಯಾಹ್ನ ಶೇಷಾದ್ರಿಪುರಂ ಪೊಲೀಸರು ಬಂದು ಚೇತನ್ ಅವರನ್ನು ಕರೆದೊಯ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದರೆ ಅಲ್ಲಿಯೂ ಕೂಡ ಚೇತನ್ ಇಲ್ಲ. ಚೇತನ್ ನಾಪತ್ತೆಯಾಗಿದ್ದಾರೆ ಕಾಣಿಸುತ್ತಿಲ್ಲ ಎಂದು ಪೊಲೀಸರಿಗೆ ತಿಳಿಸಿದರೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.

ಈ ಬೆಳವಣಿಗೆ ನೋಡಿದರೆ ತಮಗೆ ಆತಂಕವುಂಟಾಗುತ್ತಿದೆ. ಚೇತನ್ ಅವರನ್ನು ಯಾರಾದರೂ ಅಪಹರಿಸಿದ್ದಾರಾ? ಅಥವಾ ಪೊಲೀಸರೇ ಅವರನ್ನು ಬೇರೆಡೆ ಕರೆದೊಯ್ದಿದ್ದಾರಾ? ಎಂಬುದು ಗೊತ್ತಾಗುತ್ತಿಲ್ಲ. ಮಧ್ಯಾಹ್ನದಿಂದ ಚೇತನ್ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಖ್ಯಾತ ಆರ್.ಜೆ ರಚನಾ ಇನ್ನಿಲ್ಲ

Home add -Advt

Related Articles

Back to top button