Film & EntertainmentKannada NewsKarnataka News

*ಬೆಳ್ಳಂ ಬೆಳಗ್ಗೆ ಕೊಲೆ ಆರೋಪಿ ನಟ ದರ್ಶನ ಬಳ್ಳಾರಿ ಜೈಲಿಗೆ ಶಿಫ್ಟ್*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಆರೋಪಿ ನಟ ದರ್ಶನ್ ನ್ನು ಬೆಂಗಳೂರಿನಿಂದ ಗುರುವಾರ ಮುಂಜಾನೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. 

ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಶಿಪ್ಟ್ ಮಾಡಲಾಗುತ್ತಿದ್ದು, ಆಂದ್ರದ ಅನಂತಪುರದ ಮೂಲಕ ಬಳ್ಳಾರಿಯತ್ತ ಜಾಸ್ ಟೋಲ್ ಮೂಲಕ ದರ್ಶನ್ ಇರುವ ಪೊಲೀಸ್ ವಾಹನ ತೆರಳಿದೆ.

Home add -Advt

ಪೊಲೀಸರು ಬೊಲೆರೋ ವಾಹನದಲ್ಲಿ ನಟ ದರ್ಶನ್ ನನ್ನು ಕರೆದೊಯ್ದಿದ್ದಾರೆ. ಬುಧವಾರ ನ್ಯಾಯಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದು, ಆರೋಪಿಗಳಿಗೆ ಸೆ.9ರ ವರೆಗೂ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ. ಇದಾದ ಬಳಿಕ ಸ್ಥಳಾಂತರ ಪ್ರಕ್ರಿಯೆ ಆರಂಭ ಪೂರ್ವದಲ್ಲಿ ಹಲವು ಪ್ರಕ್ರಿಯೆಗಳು ನಡೆಯಬೇಕಿದೆ. ನಟ ದರ್ಶನ್ ಇಬ್ಬರು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಬೇಕು. ಸ್ಥಳ ಮಹಜರು ವೇಳೆ ನಟ ದರ್ಶನ್ ಖುದ್ದು ಹಾಜರಿರಬೇಕು. ಎಲ್ಲವನ್ನೂ ಪೂರೈಸಿ ಗುರುವಾರ ಮುಂಜಾನೆ 4 ಗಂಟೆಗೆ ಬೆಂಗಳೂರಿನಿಂದ ಬಳ್ಳಾರಿಗೆ ಕರೆದೊಯ್ಯಲಾಗುತ್ತಿದೆ. ಇನ್ನು ಕೆಲವೇ ಕ್ಷಣದಲ್ಲಿ ಬಳ್ಳಾರಿ ತಲುಪಲಿದ್ದಾರೆ.

ದರ್ಶನ್ ಕೈಯಲ್ಲಿದ್ದದ್ದು ಸಿಗರೇಟ್ ಅಥವಾ ಗಾಂಜಾನಾ, ಕಪ್‌ನಲ್ಲಿ ಕುಡಿದದ್ದು ಕಾಫಿನಾ ಅಥವಾ ಮದ್ಯನಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಇದಕ್ಕೆ ದರ್ಶನ್ ವೈದ್ಯಕೀಯ ಪರೀಕ್ಷೆ ಆಗಬೇಕಿದೆ. ರಕ್ತ ಮೂತ್ರ ಸ್ಯಾಂಪಲ್ ಪರೀಕ್ಷೆ ನಡೆಸಬೇಕಿದೆ.

ಈ ಮಧ್ಯೆ ದರ್ಶನ್ ಸಹಚರರನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿದೆ. ಕೆಲವರನ್ನು ಮೈಸೂರು, ಇನ್ನು ಕೆಲವರನ್ನು ಕಲಬುರ್ಗಿ ಹಾಗೂ ಬೆಳಗಾವಿಗೆ ಸ್ಥಳಾಂತರಿಸಲಾಗಿದೆ.

Related Articles

Back to top button