Latest

ಏಕಾಏಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ; ದೂರು ದಾಖಲಿಸಿದ್ದು ಯಾರ ವಿರುದ್ಧ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ನಟಿ, ಮೋಹಕ ತಾರೆ ರಮ್ಯಾ ಇಂದು ಏಕಾಏಕಿ ಬೆಂಗಳೂರಿನ ಹಲಸೂರು ಗೇಟ್ ಬಳಿಯ ಸಿಇಎನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿ ಅಭಿಮಾನಿಗಳ ಜತೆ ಸಂತಸ ಹಂಚಿಕೊಳ್ಳುತ್ತಿದ್ದ ರಮ್ಯಾ ಇಂದು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ನಟಿ ರಮ್ಯಾ ದೂರು ನೀಡಿದ್ದು ಯಾರ ವಿರುದ್ಧ? ಕಾರಣವೇನು ಎಂಬುದು ಇದೀಗ ಎಲ್ಲರ ಪ್ರಶ್ನೆ.

Home add -Advt

ರಮ್ಯಾ ಅವರಿಗೆ ಇನ್ ಸ್ಟಾಗ್ರಾಂ ನಲ್ಲಿ ವ್ಯಕ್ತಿಯೊಬ್ಬ ಅನುಚಿತ ಪದ ಬಳಸಿ ನಿಂದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ರಮ್ಯಾ ಇಂದು ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿಯಿರುವ ಕೇಂದ್ರ ವಿಭಾಗ ಸಿಇಎನ್ ಠಾಣೆಗೆ ಆಗಮಿಸಿ ತನ್ನ ಬಗ್ಗೆ ನಿಂದಿಸಿರುವ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. ನಟಿ ರಮ್ಯಾ ದೂರು ನೀಡಿದ್ದು ಯಾರ ವಿರುದ್ಧ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ರಮ್ಯಾ ನಿರಾಕರಿಸಿದ್ದಾರೆ. ಪೊಲೀಸರು ಕೂಡ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.
ರಾಜ್ಯಸಭಾ ಚುನಾವಣೆ; ಜೆಡಿಎಸ್ ಶಾಸಕರಿಗೆ ಸಿದ್ದರಾಮಯ್ಯ ಬರೆದ ಪತ್ರ ರಿವೀಲ್

Related Articles

Back to top button