Film & EntertainmentKannada NewsLatest

*ಕಿರುತೆರೆಯ ಖ್ಯಾತ ನಟಿ ಆತ್ಮಹತ್ಯೆಗೆ ಶರಣು*

ಪ್ರಗತಿವಾಹಿನಿ ಸುದ್ದಿ: ‘ಜೀವ ಹೂವಾಗಿದೆ’, ‘ಸಂಘರ್ಷ’, ‘ಗೌರಿ’ ಮತ್ತು ‘ನೀನಾದೆ ನಾ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿನ ತಮ್ಮ ಅಭಿನಯದ ಮೂಲಕ ಮನೆಮಾತಾಗಿದ್ದ ಕಿರುತೆರೆಯ ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಜನಪ್ರಿಯ ಕನ್ನಡ ಮತ್ತು ತಮಿಳು  ನಟಿ ನಂದಿನಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂದಿನಿ ಅವರ ಸಾವಿನಿಂದ ಇಡೀ ದೂರದರ್ಶನ ಉದ್ಯಮ ಹಾಗೂ ಅಭಿಮಾನಿ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ.

ಬೆಂಗಳೂರಿನ ಆರ್. ಆರ್. ನಗರದಲ್ಲಿ ಈ ದುರಂತ ಘಟನೆ ನಡೆದಿದ್ದು, ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ನಂದಿನಿ ಅವರು ತಮ್ಮ ಧಾರಾವಾಹಿಯೊಂದರಲ್ಲಿ ಸಾವಿನ ದೃಶ್ಯವನ್ನು ಚಿತ್ರೀಕರಿಸಿದ ಕೆಲವೇ ದಿನಗಳಲ್ಲಿ ಈ ದುರಂತ ಸಂಭವಿಸಿದೆ. 

Home add -Advt

Related Articles

Back to top button