
ಪ್ರಗತಿವಾಹಿನಿ ಸುದ್ದಿ: ಅಮೆರಿಕಾ ಹಾಗೂ ಭಾರತದ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧದ ಮದ್ಯೆ ಅಡುಗೆ ಅನಿಲ ಬೆಲೆಯಲ್ಲಿ ಇಳಿಕೆ ಆಗಲಿದೆ ಎನ್ನಲಾಗುತ್ತಿದೆ.
ಅಮೆರಿಕದ ತೆರಿಗೆ ನೀತಿಯಿಂದ ಅನೇಕ ದೇಶಗಳು ಸಮಸ್ಯೆಯನ್ನು ಅನುಭವಿಸುತ್ತಿದೆ. ಇದರಿಂದ ಭಾರತಕ್ಕೆ ಸಹ ತೊಂದರೆ ಆಗುತ್ತಿದೆ. ಆದರೆ ಎಲ್‌ಪಿ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಆಗಲಿದೆ ಎನ್ನಲಾಗುತ್ತಿದೆ. ಭಾರತ ಅಮೆರಿಕದಿಂದ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಸಜ್ಜಾಗಿದೆ ಎನ್ನಲಾಗಿದೆ.
ಕೆಲ ಮಾಹಿತಿಗಳ ಪ್ರಕಾರ, ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ತೈಲ ಕಂಪನಿಗಳು 2026 ರ ವೇಳೆಗೆ US ನಿಂದ ಮೂರು ದೊಡ್ಡ LPG ವಾಹಕಗಳನ್ನು ಖರೀದಿಸಲು ಯೋಜನೆ ಹಾಕಿದೆ. ದಾಖಲೆಗಳ ಪ್ರಕಾರ ಈ ಮೂರು ಕಂಪನಿಗಳು 331 ಮಿಲಿಯನ್ ಗಿಂತಲೂ ಹೆಚ್ಚು ಗ್ರಾಹಕರಿಗೆ LPG ಪೂರೈಸುವ ಕೆಲಸವನ್ನ ಮಾಡುತ್ತಿದೆ. ಅದರಲ್ಲಿ 60% ಕ್ಕಿಂತ ಹೆಚ್ಚು ಎಲ್‌ಪಿಜಿಯನ್ನ ಆಮದು ಮಾಡಿಕೊಳ್ಳಲಾಗುತ್ತದೆ.
ಭಾರತ ಈಗಾಗಲೇ ಬೇರೆ ಬೇರೆ ದೇಶಗಳಿಂದ ಎಲ್‌ಪಿಜಿ ವಿಚಾರವಾಗಿ ಒಪ್ಪಂದವನ್ನ ಮಾಡಿಕೊಂಡಿದೆ. ಆದರೆ ಅಮೆರಿಕದ ಜೊತೆ ಎಲ್‌ಪಿಜಿ ಒಪ್ಪಂದಕ್ಕೆ ಕೈ ಹಾಕಿರುವುದು ಇದೇ ಮೊದಲಾಗಿದೆ. ಈ ಮೂಲಕ ಅಮೆರಿಕದ ತೆರಿಗೆಯನ್ನು ಕಡಿಮೆ ಮಾಡಿಸುವ ಆಲೋಚನೆಯಲ್ಲಿ ಕೇಂದ್ರ ಸರ್ಕಾರ ಇದೆ ಎನ್ನಲಾಗಿದೆ.