Karnataka News

*ಮನೆ ಮುಂದೆ ನಿಂತಿದ್ದ ಮಹಿಳೆಗೆ ಯುವಕನಿಂದ ಕಿರುಕುಳ; ನಡು ರಸ್ತೆಯಲ್ಲೇ ತಬ್ಬಿ ಅಸಭ್ಯವಾಗಿ ವರ್ತಿಸಿದ ಕಾಮುಕ*

ಪ್ರಗತಿವಾಹಿನಿ ಸುದ್ದಿ: ರಾಜಧಾನಿ ಬೆಂಗಳೂರು ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಮಹಿಳೆಯರು ಒಬ್ಬಂಟಿಯಾಗಿ ಓಡಾಡುವುದಕ್ಕೂ ಭಯಪಡಬೇಕಾದ ಸ್ಥಿತಿ ಇದೆ.

ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಮುಂದೆ ಮಹಿಳೆಯೊಬ್ಬಳು ತನ್ನ ಕೂದಲು ಗಂಟು ಹಾಕಿಕೊಳ್ಳುತ್ತ ನಿಂತಿದ್ದರು. ಈ ವೇಳೆ ವಾಕಿಂಗ್ ಮಾಡುವವನಂತೆ ರಸ್ತೆಯಲ್ಲಿ ಬಂದ ಯುವಕನೊಬ್ಬ ಏಕಾಏಕಿ ಮಹಿಳೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸತೊಡಗಿದ್ದಾನೆ.

Home add -Advt

ನಡು ರಸ್ತೆಯಲ್ಲಿ ಮಹಿಳೆ ಕಮುಕನಿಂದ ತಪ್ಪಿಸಿಕೊಳ್ಳಲು ಪರದಾಡಿದ್ದಾರೆ. ಕಿರುಚಾಡಿ, ಕೊನೆಗೂ ಆತನಿಂದ ತಪ್ಪಿಸಿಕೊಂಡು ಓಡಿದ್ದಾರೆ. ಆದರೂ ಬೆನ್ನು ಬಿಡದ ಕಾಮುಕ ಮಹಿಳೆಯನ್ನು ಹಿಂಬದಿಯಿಂದ ಹಿಡಿದು ಕೈಯಿಂದ ಬಾಯಿ ಮುಚ್ಚಿದ್ದಾನೆ. ಮಹಿಳೆ ಆತನೊಂದಿಗೆ ಹೋರಾಡಿ ಜೋರಾಗಿ ಕಿರುಚುತ್ತಾ ತಪ್ಪಿಸಿಕೊಂಡು ಓಡಿದ್ದಾಳೆ.

ಎದುರಿನ ಮನೆಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಸದ್ಯ ಮಹಿಳೆ ಠಾಣೆಗೆ ದೂರು ನೀಡಿದ್ದು, ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button