National

*ಜಮ್ಮು-ಕಾಶ್ಮೀರದ ಉಗ್ರರ ಅಟ್ಟಹಾಸ: ಶಿವಮೊಗ್ಗ ಮೂಲದ ಪ್ರವಾಸಿಗ ಸಾವು*

ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಕನ್ನಡಿಗ ಸೇರಿ ಇಬ್ಬರು ಬಲಿಯಾಗಿದ್ದಾರೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರದೇಶದ ಬೈಸರನ್ ವ್ಯಾಲಿಯಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಾಲ್ವರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದಾರೆ. ಅವರಲ್ಲಿ ಓರ್ವ ಕರ್ನಾಟಕದ ಶಿವಮೊಗ್ಗ ನಗರದ ನಿವಾಸಿ ಮಂಜುನಾಥ್ ರಾವ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಮೃತರ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ೧೨ ಜನರು ಗಾಯಗೊಂಡಿದ್ದಾರೆ.

ಭಯೋತ್ಪಾದಕರ ದಾಳಿಯ ಭೀಕರತೆಯನ್ನು ಮಂಜುನಾಥ್ ಪತ್ನಿ ವಿವರಿಸಿದ್ದಾರೆ. ನನ್ನ ಹಾಗೂ ನನ್ನ ಮಗನ ಕಣ್ಮುಂದೆಯೇ ನನ್ನ ಪತಿಯನ್ನು ಗುಂಡಿಟ್ಟು ಬುಗ್ರರು ಹತ್ಯೆ ಮಾಡಿದ್ದಾರೆ. ನನ್ನ ಪತಿಯನ್ನು ಕೊಂದಿದ್ದೀಯಾ ನನ್ನ ಹಾಗೂ ಮಗನನ್ನು ಕೊಂದು ಬಿಡು ಎಂದು ನಾನು ಬೇಡಿಕೊಂಡೆ. ಆದರೆ ಆತ ನಿನ್ನನ್ನು ಕೊಲ್ಲಲ್ಲ. ಮೋದಿಗೆ ಹೋಗಿ ವಿಷಯ ತಿಳಿಸು ಎಂದು ಹೇಳಿ ಉಗ್ರ ಹೊರಟಿದ್ದಾನೆ. ನನ್ನ ಕಣ್ಮುಂದೆ ಪತಿ ಸಾವನ್ನಪ್ಪಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.

ನಾಲ್ವರು ಉಗ್ರರು ಪುರುಷರನ್ನು ಮಾತ್ರ ಗುಂಡಿಟ್ಟು ಹೊಡೆದಿದ್ದಾರೆ. ಕಣ್ಮುಂದೆಯೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button