Latest

ನಾವು ಕಾಂಗ್ರೆಸ್ ಬಿಟ್ಟಿಲ್ಲ ಎಂದವರಿಗೆ ಗೇಟ್ ಪಾಸ್

ನಾವು ಕಾಂಗ್ರೆಸ್ ಬಿಟ್ಟಿಲ್ಲ ಎಂದವರಿಗೆ ಗೇಟ್ ಪಾಸ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಶಾಸಕತ್ವಕ್ಕಷ್ಟೆ ರಾಜಿನಾಮೆ ಸಲ್ಲಿಸಿದ್ದೇವೆ. ಕಾಂಗ್ರೆಸ್ ಪಕ್ಷಕ್ಕಲ್ಲ. ನಾವು ಕಾಂಗ್ರೆಸ್ ನ ಸಕ್ರೀಯ ಸದಸ್ಯರು ಎನ್ನುತ್ತಿದ್ದವರಿಗೆ ಎಐಸಿಸಿ ಗೇಟ್ ಪಾಸ್ ನೀಡಿದೆ.

ಶಾಸಕತ್ವಕ್ಕೆ ರಾಜಿನಾಮೆ ನೀಡಿ ಅನರ್ಹಗೊಂಡಿರುವ 14 ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಅವರೆಲ್ಲ ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿಲ್ಲ ಎನ್ನುತ್ತಲೇ ಇದ್ದರು. ಆದರೆ ಕೆಪಿಸಿಸಿ ಶಿಫಾರಸ್ಸಿನಂತೆ ಎಐಸಿಸಿ ಅವರಿಗೆಲ್ಲ ಪಕ್ಷದಿಂದ ಗೇಟ್ ಪಾಸ್ ನೀಡಿದೆ.

ಎಸ್.ಟಿ.ಸೋಮಶೇಖರ, ಭೈರತಿ ಬಸವರಾಜ, ಎಂ.ಟಿ.ಬಿ.ನಾಗರಾಜ, ರಮೇಶ ಜಾರಕಿಹೊಳಿ, ಶಿವರಾಮ ಹೆಬ್ಬಾರ, ಡಾ.ಕೆ.ಸುಧಾಕರ, ಮುನಿರತ್ನ, ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ಪ್ರತಾಪಗೌಡ ಪಾಟೀಲ, ಬಿ.ಸಿ.ಪಾಟೀಲ, ಆರ್.ಶಂಕರ್,  ಆನಂದ ಸಿಂಗ್, ಆರ್.ರೋಷನ್ ಬೇಗ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಉಚ್ಛಾಟಿಸಲಾಗಿದೆ.

Home add -Advt

Related Articles

Back to top button