ಹಲವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಜಾ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಆಪರೇಶನ್ ಕಮಲಕ್ಕೆ ಒಳಗಾಗಿ ರಾಜಿನಾಮೆ ನೀಡಿದ್ದರೆನ್ನಲಾದ ಶಾಸಕರ ಕ್ಷೇತ್ರಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ವಜಾಮಾಡಲಾಗಿದೆ.
ಈ ಬ್ಲಾಕ್ ಅಧ್ಯಕ್ಷರು ಪಕ್ಷಸಂಘಟನೆಯಲ್ಲಿ ತೊಡಗಿಕೊಳ್ಳುತ್ತಿಲ್ಲ. ಪಕ್ಷ ಸಂಘಟನೆಗೆ ಸಹಕರಿಸುತ್ತಿಲ್ಲ ಎನ್ನುವ ದೂರನ್ನು ಜಿಲ್ಲಾ ಘಟಕಗಳು ಕೆಪಿಸಿಸಿಗೆ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನೆಲ್ಲ ವಜಾ ಮಾಡಲಾಗಿದೆ.
ಅಂದರೆ, ಈ ಎಲ್ಲ ಬ್ಲಾಕ್ ಅಧ್ಯಕ್ಷರು ರಾಜಿನಾಮೆ ನೀಡಿರುವ ಶಾಸಕರ ಬೆನ್ನಿಗೆ ನಿಂತಿದ್ದಾರೆ. ಅವರು ಬಿಜೆಪಿ ಸೇರಿದರೆ ಇವರೂ ಬಿಜೆಪಿ ಸೇರಲಿದ್ದಾರೆ ಎನ್ನುವುದು ಪಕ್ಷಕ್ಕೆ ಖಚಿತವಾದಂತಿದೆ.
ವಜಾಗೊಂಡ ಬ್ಲಾಕ್ ಅಧ್ಯಕ್ಷರ ವಿವರ ಹೀಗಿದೆ –
ಅಥಣಿಯ ಅರ್ಷದ್ ಹುಸೇನ್, ತೆಲಸಂಗದ ಶಾಮರಾವ್ ಮೀನಪ್ಪ ಪೂಜಾರಿ, ಗೋಕಾಕ ನಗರದ ಎನ್.ಎಸ್.ಶೇಖ್, ಗೋಕಾಕ ಗ್ರಾಮಾಂತರದ ಮಾರುತೆಪ್ಪ ನಿರ್ವಾಣಿ, ಯಲ್ಲಾಪುರದ ವಿ.ವಿ.ಜೋಶಿ, ಮುಂಡಗೋಡದ ರವಿಗೌಡ ಪಾಟೀಲ, ಹಿರೇಕೆರೂರಿನ ಕರೇಗೌಡ ಸಣ್ಣಕ್ಕಿ, ರಟ್ಟಿಹಳ್ಳಿಯ ಆರ್.ಎಂ.ಗಂಗೂಳ, ಹೊಸಪೇಟೆಯ ಎಂ.ರಫೀಕ್, ಕಮಲಾಪುರದ ಅಮ್ಮಾಜಿ ಹೇಮಣ್ಣ, ಚಿಕ್ಕಬಳ್ಳಾಪುರದ ಕೃಷ್ಣಮೂರ್ತಿ, ಮಂಚೇನಹಳ್ಳಿಯ ಎಂ.ನಾರಾಯಣ ಸ್ವಾಮಿ, ಕೆ.ಆರ್.ಪುರದ ಎಂ.ಮುನೇಗೌಡ, ಉದಯನಗರದ ಜಿ.ವಿ.ಮನೋಜಕುಮಾರ, ಹಾರೋಹಳ್ಳಿಯ ಬಿ.ಅನಿಲಕುಮಾರ, ಕೆಂಗೇರಿಯ ಕೆ.ಆರ್.ಮೂರ್ತಿ, ಆರ್.ಆರ್.ನಗರದ ರವಿಗೌಡ, ಯಶವಂತಪುರದ ಎಂ.ವೇಲುನಾಯ್ಕರ್, ಸಂಪಂಗಿರಾಮನಗರದ ಸಿ.ಕೃಷ್ಣೇಗೌಡ, ಭಾರತೀನಗರದ ಜಿ.ರಾಜೇಂದ್ರ, ಹೊಸಕೋಟೆನಗರದ ಎಸ್.ಅರುಣಕುಮಾರ, ಸುಲಿಬೆಲೆ ನಂದಗುಡಿಯ ಆರ್.ರವೀಂದ್ರ, ಜಡಿಗೇನಹಳ್ಳಿ ಅನುಗೊಂಡನ ಹಳ್ಳಿಯ ಬಿ.ರಘುವೀರ ವಜಾಗೊಂಡವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ