
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಹತ್ಯೆ ಮಾಡಿದವರಿಗೆ ತನ್ನ ಮನೆ, ಆಸ್ತಿ ಕೊಡುವುದಾಗಿ ಘೋಷಿಸಿದ್ದ ಅಜ್ಮಿರ್ ದರ್ಗಾ ಧಾರ್ಮಿಕ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.
ನೂಪುರ್ ಶರ್ಮಾ ಹತ್ಯೆಗೆ ಕರೆ ನೀಡಿದ್ದ ಅಜ್ಮಿರ್ ದ ಧಾರ್ಮಿಕ ಮುಖಂಡ ಸಲ್ಮಾನ್ ಚಿಷ್ತಿಯನ್ನು ಬಂಧಿಸಲಾಗಿದೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ನೂಪುರ್ ಶರ್ಮಾ ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ದೇಶದಯಂತ ಪ್ರತಿಭಟನೆ ನಡೆದಿತ್ತು. ಇದರ ಬೆನ್ನಲ್ಲೇ ನೂಪುರ್ ಗೆ ಬೆಂಬಲ ವ್ಯಕ್ತಪಡಿಸಿದ ಉದಯ್ಪು ಟೇಲರ್ ನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಈ ಎಲ್ಲಾ ಪ್ರಕರಣಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡಿಗಡೆ ಮಾಡಿದ್ದ ಸಲ್ಮಾನ್ ಚಿಷ್ತಿ ಎಂಬ ಧಾರ್ಮಿಕ ಮುಖಂಡ ನೂಪುರ್ ಶರ್ಮಾ ತಲೆ ತಂದು ತೋರಿಸಿದರೆ ನನ್ನ ಮನೆ ಹಾಗೂ ಆಸ್ತಿಯನ್ನು ಕೊಡುತ್ತೇನೆ ಎಂದು ಘೋಷಿಸಿದ್ದ.
ಖ್ವಾಜಾ ಸಾಹೇಬ್ ಹಾಗೂ ಮೊಹಮ್ಮದ್ ಸಾಹೇಬ್ ಗೌರವವನ್ನು ಬಿಜೆಪಿ ನಾಯಕಿ ಹಾಳು ಮಾಡಿದ್ದಾರೆ, ಹೀಗಾಗಿ ಅವರನ್ನು ಕೊಂದವರಿಗೆ ಸರ್ವಸ್ವವನ್ನು ಕೊಡಲು ಸಿದ್ಧ ಎಂದು ಹೇಳಿದ್ದ. ಇದೀಗ ಆರೋಪಿಯನ್ನು ರಾಜಸ್ಥಾನದ ಅಜ್ಮಿರ್ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಗೆ ಇಂದು ಹಲವು ಸಚಿವರು