National

*ಕುಡುಕ ಪತಿಯ ಕಾಟಕ್ಕೆ ಬೇಸತ್ತು ಲೋನ್ ರಿಕವರಿ ಏಜೆಂಟ್ ನನ್ನೇ ವಿವಾಹವಾದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಕುಡುಕ ಪತಿಯ ಕಾಟಕ್ಕೆ ಬೇಸತ್ತ ಪತ್ನಿ ಸಾಲ ವಸೂಲಾತಿಗೆ ಮನೆಗೆ ಬರುತ್ತಿದ ಬ್ಯಾಂಕ್ ಲೋನ್ ರಿಕವರಿ ಏಜೆಂಟ್ ನನ್ನೇ ಮದುವೆಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಇಲ್ಲಿನ ಜುಮುಯಿ ಎಂಬಲ್ಲಿ ಈ ಘಟನೆ ನಡೆದಿದೆ. ಇಂದ್ರಾಕುಮಾರಿ ಎಂಬುವವರು 2022ರಲ್ಲಿ ಜುಮುಯಿ ನಿವಾಸಿ ನಕುಲ್ ಶರ್ಮಾ ಎಂಬಾತನನ್ನು ವಿವಾಹವಾಗಿದ್ದರು. ಆರಂಭದಲ್ಲಿ ಸಂಸಾರ ಚನ್ನಾಗಿಯೇಸಾಗಿತ್ತು. ಆದರೆ ನಕುಲ್ ಶರ್ಮಾ ಕುಡಿತದ ಚಟಕ್ಕೆ ದಾಸನಾಗಿದ್ದ. ಕುಡಿತಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಕುಡಿದು ಬಂದು ಪತ್ನಿಗೆ ಅವಾಚ್ಯವಾಗಿ ನಿಂದಿಸುವುದು, ಮನಬಂದಂತೆ ಹಲ್ಲೆ ನಡೆಸುವುದು ಮಾಡುತ್ತಿದ್ದ. ಇದರಿಂದ ತೀವ್ರವಾಗಿ ಇಂದ್ರಾಕುಮಾರಿ ನೊಂದು ಬೇಸತ್ತು ಹೋಗಿದ್ದಳು.

ಈ ವೇಳೆ ಬ್ಯಾಕ್ ಲೋನ್ ರಿಕವರಿ ಏಜೆಂಟ್ ಪವನ್ ಕುಮಾರ್ ಎಂಬಾತ ಆಗಾಗ ಮನೆಗೆ ಬಂದು ಸಾಲ ಮರುಪಾವತಿ ಮಾಡುವಂತೆ ವಸೂಲಿಗೆ ಬರುತ್ತಿದ್ದ. ಈ ವೇಳೆ ಇಂದ್ರಾಕುಮಾರಿ ಸ್ಥಿತಿ ನೋಡಿ ಮರುಗಿದ್ದ. ಹೀಗೆ ಇಬ್ಬರ ನಡುವೆ ಆರಂಭವಾದ ಪರಿಚಯ, ಸ್ನೇಹ ಪ್ರೀತಿಗೆ ತಿರುಗಿದೆ. 5 ತಿಂಗಳ ಕಾಲ ತಮ್ಮ ಪ್ರೀತಿಯ ವಿಚಾರ ರಹಸ್ಯವಾಗಿಯೇ ಇಟ್ಟಿದ್ದರು.

ಬಳಿಕ ಫೆ.4ರಂದು ಇಂದ್ರಾಕುಮಾರಿ ಚಿಕ್ಕಮ್ಮನ ಮನೆ ಪಶ್ಚಿಮ ಬಂಗಾಳದ ಅಸಾನ್ ಸೋಲ್ ಗೆ ಹೋಗಿ ಕೆಲ ದಿನ ಅಲ್ಲಿ ವಾಸವಾಗಿದ್ದರು. ಬಳಿಕ ವಾಪಸ್ ಆದವರು ಫೆ.11ರಂದು ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಪವನ್ ಕುಮಾರ್ ಕುಟುಂಬ ಈ ಮದುವೆಯನ್ನು ಒಪ್ಪಿಕೊಂಡಿದೆ. ಆದರೆ ಇಂದ್ರಾಕುಮಾರಿ ಕುಟುಂಬದವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt

Related Articles

Back to top button