Latest

ಅಸಂವಿಧಾನಿಕ ವಕ್ಫ್ ರದ್ದುಪಡಿಸಲು ಸರ್ವರೂ ಒಗ್ಗೂಡುವುದು ಅವಶ್ಯ – ಕನೇರಿ ಮಠದ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಕ್ಫ್ ಕಾಯ್ದೆಯು ಮುಸ್ಲಿಂ ಮತ್ತು ಕುರಾನ್ ನಿಯಮಗಳಿಗೂ ಒಗ್ಗುವುದಿಲ್ಲ. ಅದು ಅಲ್ಲದೆ ಅಮಾನವೀಯ, ಹೀನ ಮತ್ತು ಕೌರ್ಯ ಮೆರೆಯುವ ಈ ವಕ್ಫ್ ಕಾಯ್ದೆ ಅಸಂವಿಧಾನಿಕವಾಗಿದೆ. ಈ ವಕ್ಫ್ ಕಾಯ್ದೆಗೆ ಶೀಘ್ರ ರದ್ದು ಪಡಿಸುವ ಅವಶ್ಯಕತೆಯಿದೆ ಎಂದು ಕೊಲ್ಲಾಪುರ ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.


ವಕ್ಫ್ ಮಂಡಳಿ ವಿರುದ್ಧ ಬೆಳಗಾವಿ ನಗರದ ಧರ್ಮವೀರ ಸಂಭಾಜಿ ಉದ್ಯಾನದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜರುಗಿದ ಬೃಹತ್ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.


ಬ್ರಿಟಿಷರು ಜಾರಿಗೆ ತಂದ ಈ ಕಾಯ್ದೆಯು ಸ್ವಾತಂತ್ರ್ಯ ನಂತರದ ಕಾಲದಲ್ಲಿ ಮುಸ್ಲಿಂ ಓಲೈಕೆ ರಾಜಕಾರಣದ ಪರಿಣಾಮ ಬಹಳಷ್ಟು ತಿದ್ದುಪಡಿಗಳಿಗೆ ಒಳಗಾಗಿ ಈ ಮಟ್ಟಕ್ಕೆ ಶಕ್ತಿಶಾಲಿಯಾಗಿದೆ. ನರಸಿಂಹರಾವ್ ಅವರ ಆಡಳಿತ ಮತ್ತು ಮನಮೋಹನ ಸಿಂಗ್ ಅವರ ಆಡಳಿತದಲ್ಲಿ ಈ ಕಾಯ್ದೆಗೆ ಹೊಸ ನಿಯಮಗಳನ್ನು ಸೇರ್ಪಡೆಗೊಳಿಸಿದ ಪರಿಣಾಮ ಈ ದುಸ್ಥಿತಿ ರೈತರಿಗೆ ಬಂದಿದೆ ಎಂದರು.


ವಕ್ಫ್ ಮಂಡಳಿಯಲ್ಲಿ ಓರ್ವ ಸಂಸದ, ಎಂಎಲ್‌ಎ, ಜಿಲ್ಲಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ, ಗುಮಾಸ್ತ ಮತ್ತು ನಿರ್ವಾಹಕ ಸೇರಿದಂತೆ ಓರ್ವ ಮುಸ್ಲಿಂ ಪರ್ಸನಲ್ ಕಾನೂನು ಪರಿಣಿತ ವ್ಯಕ್ತಿ ಒಟ್ಟು ಏಳು ಜನರು ಸದಸ್ಯರಾಗಿರುತ್ತಾರೆ. ಈ ಮಂಡಳಿಯಲ್ಲಿ ಮುಸ್ಲಿಂಯೇತರರಿಗೆ ಮತ್ತು ಮುಸ್ಲಿಂ ಮಹಿಳೆಯರಿಗೆ ಸ್ಥಾನವಿಲ್ಲ. ಶಿಯಾ ಮತ್ತು ಸುನ್ನಿ ಹೊರತಾಗಿ ಉಳಿದ ಮುಸ್ಲಿಂ ಉಪಜಾತಿ ಜನರಿಗೆ ಈ ವಕ್ಫ್‌ದಿಂದ ಯಾವುದೆ ಲಾಭವಿಲ್ಲ. ಈ ಬಗೆಯ ಅಸಂವಿಧಾನಿಕ ನಿಯಮಗಳ ಪರಿಣಾಮದಿಂದ ವಕ್ಫ್ ಮಂಡಳಿ ಹುಚ್ಚಾಟ ನಡೆಸಿದೆ ಎಂದರು.

Home add -Advt


ಅಕ್ಟರ್ ಕಾಲದಲ್ಲಿ ಅವರ ಕುರಿ ಓಡಾಡಿದ್ದು, ಔರಂಗಜೇಬ್ ಅರಮನೆಯ ಕುದರೆ ಓಡಾಡಿದ್ದು ಎಂತೆಲ್ಲಾ ಪಿಳ್ಳೆ ನೆಪಗಳನ್ನು ತಿಳಿಸಿ, ಜಮೀನುಗಳನ್ನು ಕಬಳಿಸಲಾಗುತ್ತಿದೆ. ಹೀಗೆ ವಕ್ಫ್ ಕೆಲಸ ಮಾಡುತ್ತಿರುವ ದುಷ್ಪರಿಣಾಮದಿಂದ ನಾಡಿನ ಮಠ, ಮಂದಿರ ಮತ್ತು ಕೃಷಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಎಂದರು.

ಕ್ರೈಸ್ತ, ಪಾರ್ಸಿ ಮತ್ತು ಜೈನ್ ಸೇರಿದಂತೆ ಉಳಿದ ಅಲ್ಪಸಂಖ್ಯಾತ ಮತಗಳಿಗೆ ನೀಡದ ವಿಶೇಷ ಸವಲತ್ತು ಕೇವಲ ಮುಸ್ಲಿಂಗೆ ಏಕೆ ಸರ್ಕಾರ ನೀಡಿದೆ. ಇದು ತುಷ್ಟಿಕರಣದ ನೀತಿಯಾಗಿದೆ ಎಂದು ಸರ್ಕಾರದ ನೀತಿಗಳನ್ನು ಖಂಡಿಸಿದರು.

ಸನಾತನ ಬೋರ್ಡ್ ಸ್ಥಾಪನೆಗೆ ಒತ್ತಾಯ
ವಕ್ಫ್ ಮಾದರಿಯಲ್ಲಿ ಸನಾತನ ಬೊರ್ಡ್ ಸ್ಥಾಪನೆಗೆ ಸರ್ಕಾರ ಮುಂದಾದರೆ, ನಾವು ಸನಾತನಿಗಳು ಅಟಕ್‌ದಿಂದ ಕಟಕ್‌ವರೆಗೆ ಅಂದರೆ ಇರಾನ್, ಇರಾಕ್ ಅಫಘಾನಿಸ್ತಾನ, ಪಾಕಿಸ್ತಾನ ಈ ಎಲ್ಲಾ ಭೂಮಿ ಭಾರತಕ್ಕೆ ಸೇರ್ಪಡೆಗೊಳ್ಳವವು. ಸನಾತನಿ ಬೋರ್ಡ್ ಸ್ಥಾಪನೆಗೊಂಡಲ್ಲಿ ನಾವು ಕೂಡಾ ಸಾಮ್ರಾಟ್ ಅಶೋಕ, ಇಮ್ಮಡಿ ಪುಲಕೇಶಿ, ಹರ್ಷವರ್ಧನ ಈ ರಾಜರ ಆಡಳಿತ ಕಾಂಬೋಡಿಯಾದವರೆಗೆ ಹಬ್ಬಿತ್ತು. ಪ್ರಪಂಚದ ಎಲ್ಲ ಖಂಡಗಳಲ್ಲಿ ಸಾಂಸ್ಕೃತಿಕವಾಗಿ ಭಾರತವು ತನ್ನ ಪ್ರಭಾವ ಬೀರಿರುವುದನ್ನು ಕಾಣುತ್ತೇವೆ. ಆ ಎಲ್ಲ ಖಂಡಗಳು ಸನಾತನ ಬೋರ್ಡ್ ವ್ಯಾಪ್ತಿಗೆ ಬರುತ್ತವೆ ಎಂದರು.

ಹಿಂದುಗಳಿಗೆ ಶತ್ರು ಹಿಂದುಗಳೆ
ಅನಾದಿ ಕಾಲದಿಂದ ಹಿಂದುಗಳು ಸೋಲನ್ನು ಹಿನ್ನೆಡೆಯನ್ನು ಅನ್ಯರಿಗಿಂತ ಉಳಿದ ಹಿಂದುಗಳ ಕುತಂತ್ರವೇ ಕಾರಣವಾಗಿದೆ. ಆದ್ದರಿಂದ ಹಿಂದುಗಳು ಒಗ್ಗೂಡಿ ಹೋರಾಟ ನಡೆಸಿದರೆ ಯಾವುದೆ ಸರ್ಕಾರವನ್ನು ಕೂಡಾ ಮಣಿಸಬಹುದು. ರಾಜ್ಯ ಸರ್ಕಾರ ಉಪಚುನಾವಣೆಯ ನಿಮಿತ್ತ ವಕ್ಫ್ ನೋಟಿಸ್ ವಾಪಸ್ಸು ಪಡೆಯಲಾಗುತ್ತಿದೆ. ಆದರೆ ಮುಂದಿನ ದಿನ ಏನು ಮಾಡುವುದು ಎಂಬುದರ ಬಗ್ಗೆ ಖಾತ್ರಿಯಿಲ್ಲ. ಆದ್ದರಿಂದ ವಕ್ಫ್ ರದ್ದುಗೊಳ್ಳುವವರೆಗೂ ಹೋರಾಟ ನಡೆಸಬೇಕು ಎಂದರು.


ಹುಕ್ಕೇರಿಯ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ನಾಡಿನ ಅನ್ನದಾತರು ರೈತರು ಸಮಸ್ಯೆಗೆ ಎಲ್ಲ ಮಠಗಳ ಸ್ವಾಮೀಜಿಗಳು ಒಗ್ಗೂಡಿ ಹೋರಾಟ ಮಾಡುತ್ತಿದ್ದೇವೆ. ರೈತರಿಗೆ ಸಂಕಷ್ಟ ನೀಡುವುದು ಸೂಕ್ತವಲ್ಲ ಎಂದು ಸರ್ಕಾರದ ನೀತಿಗಳನ್ನು ಅವರು ಖಂಡಿಸಿದರು.


ನಾಗರಿಕ ಹಿತರಕ್ಷಣಾ ಸಮಿತಿಯ ಸದಸ್ಯ ರೋಹಿತ ಉಮನಾದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹನ ಜುವಳಿ ಸ್ವಾಗತಿಸಿದರು. ಶಿವಾಜಿ ಶಹಾಪುರಕರ ವಂದಿಸಿದರು. ಡಾ. ಬಸವರಾಜ ಭಾಗೋಜಿ ಮತ್ತು ವಿನೋದ ನಿರೂಪಿಸಿದರು.

Related Articles

Back to top button