Latest
ಅಲೋಕ್ ಕುಮಾರ ಎತ್ತಂಗಡಿ, ಭಾಸ್ಕರ್ ರಾವ್ ಬೆಂಗಳೂರು ಕಮಿಷನರ್

ಅಲೋಕ್ ಕುಮಾರ ಎತ್ತಂಗಡಿ, ಭಾಸ್ಕರ್ ರಾವ್ ಬೆಂಗಳೂರು ಕಮಿಷನರ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಪೊಲೀಸ್ ಇಲಾಖೆಯಲ್ಲಿ ನೂತನ ಸರಕಾರದ ಸರ್ಜರಿ ಮುಂದುವರಿದಿದ್ದು, ಶುಕ್ರವಾರ ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ.
ನಿನ್ನೆಯಷ್ಟೆ ಸುಮಾರು 20 ಹಿರಿಯ ಅಧಿಕಾರಿಗಳನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ ಅವರನ್ನು ವರ್ಗ ಮಾಡಲಾಗಿದೆ. ಅವರನ್ನು ರಿಸರ್ವ್ ಪೊಲೀಸ್ ಗೆ ವರ್ಗಾಯಿಸಲಾಗಿದ್ದು, ಅಲ್ಲಿದ್ದ ಭಾಸ್ಕರ್ ರಾವ್ ಅವರನ್ನು ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಬೆಳಗಾವಿಯಲ್ಲಿ ಐಜಿಯಾಗಿದ್ದ ಅಲೋಕ ಕುಮಾರ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಪೊಲೀಸ್ ಕಮಿಷನರ್ ಮಾಡಿದ್ದರು. ಇದೀಗ ಯಡಿಯೂರಪ್ಪ ಅವರನ್ನು ಎತ್ತಂಗಡಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಬಹುತೇಕ ಬದಲಾವಣೆ ಮಾಡಲಾಗಿದ್ದು, ಇನ್ನೂ ವರ್ಗಾವಣೆ ಪರ್ವ ಮುಂದುವರಿಯುವ ಸಾಧ್ಯತೆ ಇದೆ.




