Latest

ಕನ್ನಡ ಬಾವುಟದಿಂದ ಮಹಿಳೆಯರ ಒಳ ಉಡುಪು ತಯಾರಿ; ಅಮೇಜಾನ್ ವಿರುದ್ಧ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಮೇಜಾನ್ ಆನ್ ಲೈನ್ ಶಾಪಿಂಗ್ ನಿಂದ ಕನ್ನಡಿಗರಿಗೆ ಅಪಮಾನ ಮಾಡಲಾಗಿದೆ. ಕನ್ನಡ  ಬಾವುಟದಲ್ಲಿ ಮಹಿಳೆಯರ ಒಳ ಉಡುಪು ತಯಾರಿಸಿ, ಅದರ ಮೇಲೆ ಕನ್ನಡ ಲಾಂಛನ, ಅಶೋಕ ಚಕ್ರ ಬಳಕೆ ಮಾಡಿ ಅವಮಾನಿಸಲಾಗಿದ್ದು, ಕಂಪನಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಅಮೇಜಾನ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಒಳ ಉಡುಪುಗಳ ಮೇಲೆ ಕನ್ನಡ ಬಾವುಟ, ಲಾಂಛನ ಬಳಕೆ ಮಾಡಲಾಗಿದೆ. ಇದು ಕನ್ನಡ ನಾಡು ನುಡಿ, ಸಂಸ್ಕೃತಿಗೆ, ಕನ್ನಡಿಗರಿಗೆ ಮಾಡಿದ ಅಪಮಾನ. ತಕ್ಷಣ ಅಮೇಜಾನ್ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮಚ್ಚು ಹಿಡಿದು ಹೋರಾಟ ಮಾಡಬೆಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕೂಡ ಇಂತಹ ಕಂಪನಿಗಳ ಹುನ್ನಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಲಾ 3,000; ಖಾತೆಗೆ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button