Uncategorized

ಮಹಾರಾಷ್ಟ್ರ ನಿಯೋಗದಿಂದ ಅಮಿತ್ ಶಾ ಭೇಟಿ: ಸಿಎಂ ಬೊಮ್ಮಾಯಿ ಟ್ವೀಟರ್ ಪ್ರತಿಕ್ರಿಯೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :  ಮಹಾರಾಷ್ಟ್ರ ಸಂಸದರು ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಕುರಿತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಶುಕ್ರವಾರ ರಾತ್ರಿ ಬೊಮ್ಮಾಯಿ ಟ್ವೀಟ್ ಮಾಡಿ ಕರ್ನಾಟಕದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ಭೇಟಿಯಿಂದ ಕರ್ನಾಟಕದ ಮೇಲೆ ಮತ್ತು ಗಡಿ ವಿವಾದದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.

ಜೊತೆಗೆ ಕರ್ನಾಟಕದ ಸಂಸದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿ ಮಾಡುವಂತೆ ತಿಳಿಸಿರುವುದಾಗಿ ಬೊಮ್ಮಾಯಿ ಹೇಳಿದ್ದಾರೆ. ತಾವೂ ಶೀಘ್ರವೇ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕರ್ನಾಟಕದ ನಿಲುವನ್ನು ತಿಳಿಸುವುದಾಗಿ ಹೇಳಿದ್ದಾರೆ.

 

“ಮಹಾರಾಷ್ಟ್ರದ ನಿಯೋಗ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದು ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಹಿಂದೆ ಕೂಡ ಮಹಾರಾಷ್ಟ್ರ ಈ ರೀತಿಯ ಪ್ರಯತ್ನ ಮಾಡಿದೆ‌. ಈ ಪ್ರಕರಣ ಸುಪ್ರೀಂ ಕೊರ್ಟ್ ನಲ್ಲಿದೆ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ನ್ಯಾಯ ಸಮ್ಮತ ಪ್ರಕರಣ ಗಟ್ಟಿಯಾಗಿದೆ. ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

“ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಸೋಮವಾರ ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ  ಅವರನ್ನು ಭೇಟಿ ಮಾಡಲು ತಿಳಿಸಿದ್ದೇನೆ. ನಾನೂ ಕೂಡ ರಾಜ್ಯದ ನ್ಯಾಯ ಸಮ್ಮತ ನಿಲುವನ್ನು ತಿಳಿಸಲು ಕೇಂದ್ರ ಗೃಹ ಸಚಿವರನ್ನು ಶೀಘ್ರವೇ ಭೇಟಿ ಮಾಡಲಿದ್ದೇನೆ” ಎಂದೂ ಬೊಮ್ಮಾಯಿ ಹೇಳಿದ್ದಾರೆ. 

 

ಶಾಂತವಾಗಿದ್ದ ಗಡಿ ವಿವಾದವನ್ನು ಕೆಣಕಿರುವ ಮಹಾರಾಷ್ಟ್ರ ಈಗ ಇಂಗು ತಿಂದ ಮಂಗನಂತಾಗಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ನಿರಂತರ ಅನ್ಯಾಯ ಮಾಡುತ್ತ, ಮಲತಾಯಿ ಧೋರಣೆಯಿಂದ ನೋಡುತ್ತ ಬಂದಿರುವ ಮಹಾರಾಷ್ಟ್ರ ಈಗ ಕನ್ನಡಿಗರಿಗೆ ನ್ಯಾಯ ಒದಗಿಸುವ ಬದಲು ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡತೊಡಗಿದೆ. ಜೊತೆಗೆ ಗಮನ ಬೇರೆಡೆ ಸೆಳೆಯಲು ಅನಗತ್ಯ ವಿವಾದವೆಬ್ಬಿಸುತ್ತಿದೆ.

ಮಹಾರಾಷ್ಟ್ರದ ಸಂಸದರು ಶುಕ್ರವಾರ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿದ್ದಾರೆ. ತಮ್ಮ ಹಳೆಯ ಸವಕಲು ಬೇಡಿಕೆಯಾಗಿರುವ ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಪ್ರದೇಶಗಳನ್ನು ಕೇಂದ್ರಾಡಳಿತ ಪ್ರಪದೇಶವನ್ನಾಗಿ ಘೋಷಿಸುವಂತೆ ಬೇಡಿಕೆ ಮಂಡಿಸಿದ್ದಾರೆ. ಗಡಿ ವಿವಾದವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಒಯ್ದಿರುವ ಮಹಾರಾಷ್ಟ್ರ ಈಗ ಸರ್ವೋಚ್ಛ ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯಲು ತಯಾರಿಲ್ಲ.

ಈ ಹಿಂದೆ ಒತ್ತಡ ಹೇರಿ ಮಹಾಜನ್ ಆಯೋಗ ರಚಿಸಿದ್ದ ಮಹಾರಾಷ್ಟ್ರ ನಂತರ ಮಹಾಜನ್ ಆಯೋಗದ ವರದಿಯನ್ನು ಒಪ್ಪಲು ಸಿದ್ಧವಿಲ್ಲ. ತಾನೇ ಹೇಳಿ ರಚಿಸಿಕೊಂಡಿದ್ದ ವರದಿಯನ್ನೇ ಒಪ್ಪಲು ಸಿದ್ಧವಿಲ್ಲ. ಇಂತಹ ದ್ವಂದ್ವ ನಿಲುವಿನಲ್ಲಿರುವ ಮಹಾರಾಷ್ಟ್ರ ಈಗ ಕನ್ನಡಿಗರನ್ನು ಕೆಣಕಲು ಇಲ್ಲದ ದಾರಿ ಹುಡುಕುತ್ತಿದೆ.

ಕರ್ನಾಟಕವೂ ಕೇಂದ್ರ ಗೃಹತ ಸಚಿವರಿಗೆ ನಿಜ ಸ್ಥಿತಿಯನ್ನು ಮನದಟ್ಟು ಮಾಡಿಕೊಡಬೇಕಾದ ಅಗತ್ಯವಿದೆ. ಕರ್ನಾಟಕ ಸಂಸದರ ನಿಯೋಗ ತಜ್ಞರೊಂದಿಗೆ ತೆರಳಿ ವಿಷಯ ಮಂಡಿಸಬೇಕಿದೆ.

 

Big Breaking- ಬೆಳಗಾವಿ ಗಡಿವಿವಾದ; ಗೃಹ ಸಚಿವ ಅಮಿತ್ ಶಾ ಜೊತೆ ಗುರುವಾರ ಮಹಾರಾಷ್ಟ್ರ ಸಂಸದರ ಸಭೆ ; ಕರ್ನಾಟಕ ಸಂಸದರೇ ಎದ್ದೇಳಿ

https://pragati.taskdun.com/big-breaking-belgaum-border-dispute-meeting-of-maharashtra-mps-with-home-minister-amit-shah-on-thursday-wake-up-karnataka-mps/

ಮಹಾರಾಷ್ಟ್ರದಲ್ಲಿ ತಲ್ಲಣವೆಬ್ಬಿಸಿದ ಬೊಮ್ಮಾಯಿ ಮಾಸ್ಟ್ರ್ ಸ್ಟ್ರೋಕ್!; ಇಂಗು ತಿಂದ ಮಂಗನಂತಾದ ಮಹಾನಾಯಕರು!!

 

https://pragati.taskdun.com/bommai-master-stroke-that-created-panic-in-maharashtra/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button