Kannada NewsKarnataka NewsLatestPolitics

*ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಜೊಲ್ಲೆ ದಂಪತಿ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನವದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಭೇಟಿಯಾದ ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಬೀರೇಶ್ವರ ನೂತನ ಕಛೇರಿ ಮತ್ತು ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಎಥೆನಾಲ್ ಘಟಕ ಉದ್ಘಾಟನೆಗೆ ಆಹ್ವಾನಿಸಿದರು.

Home add -Advt

ಜೊಲ್ಲೆ ಗ್ರೂಪ್ ನ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಿಟಿ ಲಿ., (ಬಹು-ರಾಜ್ಯ) ಸಂಸ್ಥೆಯ ನೂತನ ಮುಖ್ಯ ಕಛೇರಿಯ ಉದ್ಘಾಟನೆಗೆ ಹಾಗೂ ಶ್ರೀ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿಪ್ಪಾಣಿ ಎಥೆನಾಲ್ ಉತ್ಪಾದಿಸುವ (ಡಿಸ್ಟಿಲರಿ) ಘಟಕ ಮತ್ತು ಆಧುನಿಕರಣಗೊಂಡ ಸಕ್ಕರೆ ಕಾರ್ಖಾನೆ ಸ್ಥಾವರ ಘಟಕದ ಉದ್ಘಾಟನೆಗೆ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯ ಉಪಾಧ್ಯಕ್ಷರಾದ ಡಾ.ಅಜೀತ ಘೋಪಛಡೆ, ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾದ ಸಂಜಯ ಪಾಟೀಲ ಉಪಸ್ಥಿತರಿದ್ದರು.


Related Articles

Back to top button