Latest

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಅಮೃತಾ ನಾಯ್ಡು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡನೇ ಮಗಳು ಸಮನ್ವಿಯನ್ನು ಕಳೆದುಕೊಂಡು ಕಂಗೆಟ್ಟಿದ್ದ ನಟಿ ಅಮೃತಾ ನಾಯ್ಡು ಹಾಗೂ ರೂಪೇಶ್ ಕುಟುಂಬದಲ್ಲಿ ಮತ್ತೆ ಸಂತಸ ಮನೆ ಮಾಡಿದೆ. ಅಮೃತಾ ನಾಯ್ಡು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಾವು ಗಂಡು ಮಗುವಿಗೆ ಜನ್ಮ ನೀಡಿದ್ದಾಗಿ ನಟಿ ಅಮೃತಾ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಅಭಿಮಾನಿಗಳು, ನಟ-ನಟಿಯರು ತಾಯಿ ಮಗುವಿಗೆ ಶುಭ ಹಾರೈಸಿದ್ದಾರೆ.

Home add -Advt

’ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಬಾಲ ನಟಿ ಸಮನ್ವಿ ರಸ್ತೆ ಅಪಘಾತದಲ್ಲಿ ನಿಧನಳಾಗಿದ್ದಳು. ಅಮೃತಾ ಹಾಗೂ ರೂಪೇಶ್ ಬದುಕಲ್ಲಿ ಕತ್ತಲು ಆವರಿಸಿತ್ತು. ಸಮನ್ವಿ ಸಾವನ್ನಪ್ಪಿದ್ದ ದಿನಗಳಲ್ಲಿ ಅಮೃತಾ ನಾಯ್ಡು 4 ತಿಂಗಳ ಗರ್ಭಿಣಿಯಾಗಿದ್ದರು. ಇದೀಗ ಕುಟುಂಬದಲ್ಲಿ ಹೊಸ ಮಗುವಿನ ಆಗಮನವಾಗಿದ್ದು, ಬಾಳಲ್ಲಿ ಹೊಸ ಬೆಳಕು ಮೂಡಿದೆ.
ಚಲಿಸುತ್ತಿದ್ದ ರೈಲಿನಿಂದ ಹಾರಿ ಆತ್ಮಹತ್ಯೆಗೆ ಶರಣಾದ ಮೆಡಿಕಲ್ ವಿದ್ಯಾರ್ಥಿನಿ

Related Articles

Back to top button