ಫೋನ್ ಕರೆ ಬಂದಿಲ್ಲ ಎಂದು ರಾಜಿನಾಮೆಗೆ ಮುಂದಾದ ಆನಂದ ಮಾಮನಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ತಮಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಕರೆ ಬಾರದಿರುವ ಹಿನ್ನೆಲೆಯಲ್ಲಿ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸವದತ್ತಿ ಶಾಸಕ ಆನಂದ ಮಾಮನಿ ತಿಳಿಸಿದ್ದಾರೆ.
ನಾನು ಸತತ 3 ಬಾರಿ ಶಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನನಗೆ ಸಚಿವ ಸ್ಥಾನ ನೀಡಬೇಕು. ಸಚಿವಸ್ಥಾನ ನೀಡಿದರೆ ವಿಧಾನಸಭೆಯ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತೇನೆ. ಸಚಿವಸ್ಥಾನ ಕೊಡದಿದ್ದರೆ ಪ್ರತಿಭಟನಾರ್ಥವಾಗಿ ಉಪಾಧ್ಯಕ್ಷಸ್ಥಾನಕ್ಕೂ ರಾಜಿನಾಮೆ ನೀಡುತ್ತೇನೆ ಎಂದು ಮಾಮನಿ ಕೆಲವು ದಿನಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು.
ಇಂದು ಬೆಳಗ್ಗೆ ಪುನಃ ಮಾತನಾಡಿದ ಮಾಮನಿ, ನನಗೆ ಈವರೆಗೂ ಮುಖ್ಯಮಂತ್ರಿ ಕಚೇರಿಯಿಂದ ಕರೆ ಬಂದಿಲ್ಲ. ಹಾಗಾಗಿ ನಾನು ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಇದರಿಂದಾಗಿ ಬೊಮ್ಮಾಯಿ ಸರಕಾರದಲ್ಲಿ ಮಾಮನಿಯಿಂದಲೇ ಬಂಡಾಯದ ಕಹಳೆ ಮೊಳಗಿದಂತಾಗಿದೆ.
ಹೊಸ ಮುಖ್ಯಮಂತ್ರಿಗೆ ಆನಂದ ಮಾಮನಿ ಎಚ್ಚರಿಕೆ
11 ಗಂಟೆಗೆ ರಾಜಭವನದಿಂದ ನೂತನ ಸಚಿವರ ಪಟ್ಟಿ ಪ್ರಕಟ – ಬೊಮ್ಮಾಯಿ




