Latest

ರಮೇಶ್ ಜಾರಕಿಹೊಳಿ ಹೇಳಿಕೆ ಅಲ್ಲಗಳೆದ ಎಂಟಿಬಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಂಟಿಬಿ ನಾಗರಾಜ್ ಅವರಿಂದ ಸಾಲ ಪಡೆದು ಸಿ.ಪಿ.ಯೋಗೇಶ್ವರ್ ವಲಸಿಗ ಶಾಸಕರನ್ನು ಒಗ್ಗೂಡಿಸಿದ್ದರು ಎಂಬ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ಅಲ್ಲಗಳೆದಿರುವ ನೂತನ ಸಚಿವ ಎಂಟಿಬಿ ನಾಗರಾಜ್, ಇದು ಸುಳ್ಳು, ಯೋಗೇಶ್ವರ್ ಗೆ ನಾನು ಸಾಲ ನೀಡಿಲ್ಲ ಎಂದಿದ್ದಾರೆ.

ಸಚಿವ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂಟಿಬಿ ನಾಗರಾಜ್, ಸಿ.ಪಿ.ಯೋಗೇಶ್ವರ್ ಗೆ ನಾನು ಯಾವುದೇ ಸಾಲ ನೀಡಿಲ್ಲ. ಯೋಗೇಶ್ವರ್ ಹಾಗೂ ನಾನು ಉತ್ತಮ ಸ್ನೇಹಿತರು. ನಮ್ಮ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ ಎಂದು ಹೇಳಿದ್ದಾರೆ.

Home add -Advt

ಅಲ್ಲದೇ ರಮೇಶ್ ಜಾರಕಿಹೊಳಿ ಯಾಕೆ ಹಾಗೆ ಹೇಳಿದರೆಂದು ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಅವರನ್ನೇ ಕೇಳುತ್ತೇನೆ. ಆದರೆ ಯೋಗೇಶ್ವರ್ ಅವರು ವಲಸಿಗ ಶಾಸಕರನ್ನು ಒಗ್ಗೂಡಿಸುವಲ್ಲಿ ಸ್ವಲ್ಪಮಟ್ಟಿನ ಪಾತ್ರ ವಹಿಸಿದ್ದು ನಿಜ ಎಂದು ಹೇಳಿದ್ದಾರೆ.

ಎಂಟಿಬಿಯಿಂದ ಯೋಗೇಶ್ವರ್ ಸಾಲ ಪಡೆದು ನಮ್ಮನ್ನು ಒಗ್ಗೂಡಿಸಿದ್ದರು: ಸಚಿವ ರಮೇಶ್ ಜಾರಕಿಹೊಳಿ

Related Articles

Back to top button