Latest

ಅಣ್ಣಾ ಸಾಹೇಬ ಜೊಲ್ಲೆಯವರ 2 ಪ್ರಶ್ನೆ: ಕೇಂದ್ರ ಸರಕಾರದ ಉತ್ತರ

ಪ್ರಗತಿವಾಹಿನಿ ಸುದ್ದಿ, ನವದೆಹಲಿ –  ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಮ್‌ಜಿಎನ್‌ಆರ್‌ಜಿಎಸ್) ಅನುಷ್ಠಾನಕ್ಕೆ ಕೊವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಅನುದಾನ ಬಿಡುಗಡೆ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಯವರ ಪ್ರಶ್ನೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರು ಉತ್ತರ ಪೂರೈಸಿದ್ದಾರೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದ್ದು, ಅದರಂತೆ ನಿರಂತರವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ.  ಯೋಜನೆಯ ಮಾರ್ಗಸೂಚಿಯ ಪ್ರಕಾರ ೨೦೨೦-೨೧ ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ರೂ.೩೯೯೩.೮೦ ಕೋಟಿ ಹಾಗೂ ೨೦೨೧-೨೨ (೩೦.೦೬.೨೧ ರವರೆಗೆ) ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ರೂ.೧೨೭೬.೦೩  ಕೋಟಿ ಅನುದಾನವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆಗೊಳಿಸಿದೆ. ಕಾರ‍್ಯಕ್ರಮಗಳ ಅನುಷ್ಠಾನವನ್ನು ಪರಿಶೀಲಿಸಲು ರಾಷ್ಟ್ರೀಯ ಮಟ್ಟದ ಮಾನಿಟರಗಳು, ಸಾಮಾನ್ಯ ಪರಿಶೀಲನಾ ಕಾರ‍್ಯಾಚರಣೆ ಮತ್ತು ಸಚಿವಾಲಯ ಅಧಿಕಾರಿಗಳು ಸ್ವಯಂ ಭೇಟಿ ನೀಡಿ ಪರಿಶೀಲಿಸಿ  ಸಂಸದರ ಮಾರ್ಗದರ್ಶನದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಯೋಜನೆ ಅಡಿ ನ್ಯೂನ್ಯತೆಗಳನ್ನು ಸರಿಪಡಿಸಲು ಲೆಕ್ಕ ಪರಿಶೋಧಕ ಮಾನದಂಡಗಳನ್ನು ಪಾಲಿಸಲಾಗುತ್ತಿದ್ದು, ರಾಜ್ಯಗಳ ಮತ್ತು ಸ್ವತಂತ್ರ ಸಾಮಾಜಿಕ ಲೆಕ್ಕ ಪರಿಶೋಧನಾ ನಡೆಸಲು ಗ್ರಾಮಾಂತರ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲು ಸೂಚಿಸಲಾಗಿದೆ. ಆದಾಗ್ಯೂ ಇಲಾಖೆ ಅಂತರಿಕ ಲೆಕ್ಕ ಪರಿಶೋಧನಾ ತಂಡಗಳು ಸಹ ಮೇಲಿಂದ ಮೇಲೆ ಪರಿಶೀಲನೆ ನಡೆಸಿ ಸಾರ್ವಜನಿಕರ ದೂರು/ಕುಂದು ಕೊರತೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತನಿಕೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

 

ಕಂಪನಿಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅನುದಾನ

 

ಪ್ರಗತಿವಾಹಿನಿ ಸುದ್ದಿ, ನವದೆಹಲಿ –  ಕಂಪನಿಗಳ ಕಾರ್ಪೂರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅನುದಾನ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆಯವರ ಪ್ರಶ್ನೆಗೆ ರಂದು ಕೇಂದ್ರ ಯೋಜನೆ ಮತ್ತು ಸಾಂಸ್ಥಿಕ(ಅಂಕಿ ಅಂಶಗಳು) ಮತ್ತು ಕಾರ್ಪೋರೇಟ್ ವ್ಯವಹಾರಗಳ ರಾಜ್ಯ ಸಚಿವ ಇಂದ್ರಜಿತ್ ಸಿಂಗ್ ಅವರು ಉತ್ತರ ಪೂರೈಸಿದ್ದಾರೆ.

ಕಂಪನಿಗಳಿಂದ ಸಿಎಸ್‌ಅರ್ ಅಡಿ ಸಾಮಾಜಿಕ ಉಪಯೋಗಿ ಕಾರ‍್ಯಕ್ರಮಗಳ ಅನುಷ್ಠಾನ ಹಾಗೂ ವೆಚ್ಚದ ವಿವರಗಳು ಸಾರ್ವಜನಿಕರಿಗೆ ಲಭ್ಯ:

ಕಂಪನಿ ಕಾಯ್ದೆ ೨೦೧೩, ಸೆಕ್ಷನ್ ೧೩೫ ಪ್ರಕಾರ ರೂ.೫೦೦ ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ನೆಟ್ ವರ್ತ ಹೊಂದಿದ್ದು ಅಥವಾ ರೂ. ೧೦೦೦ ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಅಥವಾ ಹಿಂದಿನ ಹಣಕಾಸು ವರ್ಷದಲ್ಲಿ ರೂ. ೫ ಕೋಟಿಗಳ ನಿವ್ವಳ ಲಾಭ ಹೊಂದಿರುವ ಪ್ರತಿಯೊಂದು ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅನ್ವಯ(ಸಿಎಸ್‌ಆರ್) ಸಮಾಜ ಉಪಯೋಗಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುವಾಗುವಂತೆ ಹಾಗೂ ಚಟುವಟಿಕೆಗಳನ್ನು ಯೋಜಿಸಿ ನಿರ್ಧರಿಸಿ ಕಾರ‍್ಯಗತಗೊಳಿಸಲು ಕಂಪನಿಯ ಮಂಡಳಿಗೆ ಅಧಿಕಾರ ನೀಡಲಾಗಿದೆ.

ಸಿಎಸ್‌ಆರ್ ಮಂಡಳಿ ಚಾಲಿತ ಪ್ರಕ್ರಿಯೆ ಆಗಿದ್ದು, ನೋಂದಾಯಿತ ಕಂಪನಿಗಳು ಎಂಸಿಎ ೨೧ ರನ್ವಯ ಚಟುವಟಿಕೆಗಳ ಕುರಿತು ವಾರ್ಷಿಕ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಸಿಎಸ್‌ಆರ್ ಸಮಿತಿ ಮತ್ತು ಮಂಡಳಿಯ ಹೊಣೆಗಾರಿಕೆ, ಶಾನಸಬದ್ದವಾದ ಲೆಕ್ಕ ಪರಿಶೋಧನೆಗೆ ಕಾನೂನು ಅಸ್ತಿತ್ವದಲ್ಲಿದ್ದು ಉಲ್ಲಂಘನೆ ಮಾಡುವ ಅಥವಾ ವರದಿ ಸಲ್ಲಿಸದ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.

ಜಿಲ್ಲಾವಾರು, ರಾಜ್ಯವಾರು ನೋಂದಾಯಿತ ಕಂಪನಿಗಳು ಸಲ್ಲಿಸಿದ ಸಿಎಸ್‌ಅರ್ ವರದಿಗಳು ಸಾರ್ವಜನಿಕರಿಗಾಗಿ http://www.csr.gov.in   ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ೨೦೧೬-೧೭ ನೇ ಸಾಲಿನಿಂದ ೨೦೧೯-೨೦ ರ ಹಣಕಾಸು ವರ್ಷವಾರು ವೆಚ್ಚ ಮಾಡಿದ ವಿವರಗಳು ಸಾರ್ವಜನಿಕರ ವೀಕ್ಷಣೆಗೆ ದಾಖಲೆಗಳು ಲಭ್ಯವಾಗುವಂತೆ ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

 

ರಾಜ್ ಕುಂದ್ರಾ ತಯಾರಿಸುತ್ತಿದ್ದುದು ಪೊರ್ನ್ ವಿಡಿಯೋ ಅಲ್ಲ; ಎರೋಟಿಕಾ ವಿಡಿಯೋ ಎಂದ ಮಾಡೆಲ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button