Kannada NewsKarnataka NewsLatestPolitics

*ಅನ್ನಭಾಗ್ಯ ಯೋಜನೆ; ತೆಲಂಗಾಣದಿಂದ ಭತ್ತ, ಛತ್ತೀಸ್ ಗಢದಿಂದ ಅಕ್ಕಿ; ಸಿಎಂ ಸಿದ್ದರಾಮಯ್ಯ ಮಾಹಿತಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅನ್ನಭಾಗ್ಯ ಯೋಜನೆಗಾಗಿ ತೆಲಂಗಾಣ ಸರ್ಕಾರ ರಾಜ್ಯಕ್ಕೆ ಭತ್ತ ಕೊಡುವುದಾಗಿ ತಿಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತೆಲಂಗಾಣ ಸರ್ಕಾರ ನಮಗೆ ಭತ್ತ ಕೊಡುವುದಾಗಿ ಹೇಳಿದೆ. ಛತ್ತೀಸ್ ಗಢ ಸರ್ಕಾರ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡುವುದಾಗಿ ಹೇಳಿದೆ ಎಂದರು.

Home add -Advt

ಪಂಜಾಬ್ ಸರ್ಕಾರ ಕೂಡ ನವೆಂಬರ್ ನಿಮ್ದ ಅಕ್ಕಿ ಕೊಡುವುದಾಗಿ ಹೇಳಿದೆ. ಎನ್ ಸಿಸಿಎಫ್ ಕೇಂದ್ರೀಯ ಭಂಡಾರ, ನಫೆಡ್ ನಿಮ್ದ ಕೊಟೆಷನ್ ಕೇಳಿದ್ದೇವೆ. ಅವರು ಕೊಟ್ಟ ಬಳಿಕ ದರ, ಗುಣಮಟ್ಟ, ಪ್ರಮಾಣ ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.


Related Articles

Back to top button