Belagavi NewsBelgaum NewsKannada NewsKarnataka News

ಮಾ.18 ರಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಉತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಬೆಳಗಾವಿಯ ರಾಣಿ ಚನ್ನಮ್ಮ ನಗರದಲ್ಲಿ ಇರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಉತ್ಸವ ಮಾ.18 ರಂದು ಇರುವ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಲಿವೆ. 

ಮಾ 16ರಂದು ಖಾದರವಾಡಿಯ ವಾರಕರಿ ಭಜನಾ ಮಂಡಳಿ ವತಿಯಿಂದ ಭಜನೆ ನಡೆಯಲಿದೆ.‌ ಮಾ. 17 ರಂದು ಕುಂಕುಮಾರ್ಚನೆ ಹಾಗೂ ಚಿದಂಬರ ನಗರದ ಶ್ರೀ ಲಕ್ಷ್ಮೀ ಶೋಭಾನ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ.

ಮಾ. 18 ರಂದು ಬೆಳಿಗ್ಗೆ 9 ಘಂಟೆಗೆ ಅಭಿಷೇಕ ಮತ್ತು ಅಲಂಕಾರ, ಗಣ ಹೋಮ, ಮಧ್ಯಾಹ್ನ 1 ಗಂಟೆಯಿಂದ 3ರ ವರೆಗೆ ಮಹಾಪ್ರಸಾದ, ಸಾಯಂಕಾಲ ಪಲ್ಲಕ್ಕಿ ಸೇವೆ ಮತ್ತು ರಾಗರಾಗಿಣಿ ಭಜನಾ ಮಂಡಳಿಯಿಂದ ಕೋಲಾಟ ನಡೆಯಲಿದೆ.‌ ಎಲ್ಲ ಕಾರ್ಯಕ್ರಮಕ್ಕೆ ಭಕ್ತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button