Latest

ಎಐಎಡಿಎಂಕೆಯಿಂದ ಮಾಜಿ ಸಿಎಂ ಪನ್ನೀರ್ ಸೆಲ್ವಂ ಉಚ್ಛಾಟನೆ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ತಮಿಳುನಾಡು ರಾಜಕೀಯ ವಲಯದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಯಡಪ್ಪಾಡಿ ಪಳನಿಸ್ವಾಮಿ ಆಯ್ಕೆಯಾಗುತ್ತಿದ್ದಂತೆ ಮಾಜಿ ಸಿಎಂ ಪನ್ನೀರ್ ಸೆಲ್ವಂ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ.

ಇಂದು ಚೆನ್ನೈನಲ್ಲಿ ನಡೆದ ಎಐಎಡಿಎಂಕೆ ಸಭೆಯಲ್ಲಿ ಪಕ್ಷದ ಹಂಗಾಮಿ ಪ್ರಧಾನಿ ಕಾರ್ಯದರ್ಶಿಯನ್ನಾಗಿ ಎ.ಪಳನಿಸ್ವಾಮಿಯವರನ್ನು ಆಯ್ಕೆಯಾಗುತ್ತಿದ್ದಂತೆ ಪಕ್ಷದ ಹಿರಿಯ ನಾಯಕ, ಮಾಜಿ ಸಿಎಂ ಓ.ಪನ್ನೀರ್ ಸೆಲ್ವಂ ಅವರನ್ನು ಎಐಎಡಿಎಂಕೆಯ ಎಲ್ಲಾ ಹುದ್ದೆ, ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿದ್ದಾರೆ.

ಪನ್ನೀರ್ ಸೆಲ್ವಂ ಡಿಎಂಕೆ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತಡಗಿದ್ದಾರೆ ಎಂದು ಆರೋಪಿಸಿರುವ ಪಳನಿಸ್ವಾಮಿ, ಪನ್ನೀರ್ ಸೆಲ್ವಂ ಸೇರಿದಂತೆ ಅವರ ನಾಲ್ವರು ಬೆಂಬಲಿಗರನ್ನು ಕೂಡ ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಂಗಾಮಿ ಪ್ರಧಾನಕಾರ್ಯದರ್ಶಿ ಆಯ್ಕೆ ಹಾಗೂ ಪಕ್ಷದ ಸಂಯೋಜಕ, ಜಂಟಿ ಸಂಯೋಜಕ ಹುದ್ದೆ ರದ್ದುಗೊಳಿಸಲು ಕರೆದಿದ್ದ ಸಾಮಾನ್ಯ ಸಭೆಯನ್ನು ರದ್ದುಗೊಳಿಸುವಂತೆ ಕೋರಿ ಪನ್ನೀರ್ ಸೆಲ್ವಂ ಮದ್ರಾಸ್ ಹೈಕೋರ್ಟ್ ಮೊರೆಹೋಗಿದ್ದರು. ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್, ಸಭೆ ನಡೆಸಲು ಅನುಮತಿ ನೀಡಿತ್ತು. ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಪಳನಿಸ್ವಾಮಿ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಿದ್ದಂತೆ ಪನ್ನೀರ್ ಸೆಲ್ವಂ ಅವರನ್ನೇ ಪಕ್ಷದಿಂದ ಉಚ್ಛಾಟಿಸಿದ್ದಾರೆ.

Home add -Advt

ಪನ್ನೀರ್ ಸೆಲ್ವಂ ಬೆಂಬಲಿಗರು ಪಕ್ಷದ ಕಚೇರಿಯಲ್ಲಿ ಗಲಾಟೆ ನಡೆಸಿದ್ದು, ಪಳನಿಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

AIADMK ಮುಖಂಡರ ಮಾರಾಮಾರಿ; ಕಚೇರಿ ಎದುರು ರಸ್ತೆಯಲ್ಲೇ ಹೊಡೆದಾಡಿಕೊಂಡ ಕಾರ್ಯಕರ್ತರು

Related Articles

Back to top button