Karnataka News

*ರಾಜ್ಯದ ಈ ಮೂರು ನಗರಗಳಲ್ಲಿ ನಡೆಯಲಿದೆ ನಾಳೆ ಮಾಕ್ ಡ್ರಿಲ್*

ಪ್ರಗತಿವಾಹಿನಿ ಸುದ್ದಿ: ಪಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸನ್ನದ್ಧವಾಗಿದ್ದು, ಪಾಕಿಸ್ತಾನದ ವಿರುದ್ಧ ಭಾರತದ ರಣಬೇಟೆ ಆರಂಭವಾಗಿದೆ. ಈಗಾಗಲೇ ನದಿ ನೀರು ನಿಲ್ಲಿಸುವ ಮೂಲಕ ಭಾರತ ಪಾಕಿಸ್ತಾನಕ್ಕೆ ಜಲಘಾತ ನೀಡಿದೆ. ಇದರ ಬೆನ್ನಲ್ಲೇ ಭಾರತ ಯುದ್ಧಕ್ಕೆ ಸನ್ನದ್ಧವಾಗಿದ್ದು ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.

Related Articles
Home add -Advt

ಯುದ್ಧ ಸಂದರ್ಭದಲ್ಲಿ ದೇಶದ ಜನರು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಅಣುಕು ಪ್ರದರ್ಶನ ನಡೆಸಲು ನಾಳೆ ದೇಶಾದ್ಯಂತ ಮಾರ್ಕ್ ಡ್ರಿಲ್ ನಡೆಸಲು ಕೇಂದ್ರ ಗೃಹ ಇಲಾಖೆ ಡಿಫೆನ್ಸ್ ಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ದೇಶಾದ್ಯಂತ ಯುದ್ಧದ ಸೈರನ್ ಮೊಳಗಲಿದ್ದು, ತಾಲೀಮು ನಡೆಯಲಿದೆ.

ಮಾಕ್ ಡ್ರಿಲ್ ಗೆ ರಾಜ್ಯದ ಮೂರು ನಗರಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕದ ಮೂರು ನಗರಗಳಲ್ಲಿ ಮಾರ್ಕ್ ಡ್ರಿಲ್ ನಡೆಯಲಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಬೆಂಗಳೂರು ನಗರ, ಮಲ್ಲಾಪುರ (ಕಾರವಾರ) ಹಾಗೂ ರಾಯಚೂರು ನಗರ ಈ ಮೂರು ಸ್ಥಳಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ. ಯುದ್ಧದ ಸಂದರ್ಭದಲ್ಲಿ ಜನರು ಯಾವ ರೀತಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು. ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬ ನಿಟ್ಟಿನಲ್ಲಿ ಸಿವಿಲ್ ಡಿಫೆನ್ಸ್ ನಿಂದ ಅಣುಕು ಪ್ರದರ್ಶನ ನಡೆಯಲಿದೆ.


Related Articles

Back to top button