Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿ ಉತ್ತರ ವಲಯದ 8ನೇ ಕರ್ತವ್ಯ ಕೂಟ: ನಗರ ಘಟಕಕ್ಕೆ 13 ಬಹುಮಾನ*:

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಉತ್ತರ ವಲಯ ಮಟ್ಟದ 8ನೇ ಕರ್ತವ್ಯ ಕೂಟ – 2026ರಲ್ಲಿ ಬೆಳಗಾವಿ ನಗರ ಪೊಲೀಸ್ ಘಟಕದ ತಂಡವು ಭಾಗವಹಿಸಿ, ವಿವಿಧ ತಾಂತ್ರಿಕ, ವೈಜ್ಞಾನಿಕ ಹಾಗೂ ವಿಶೇಷ ಪೊಲೀಸ್ ಕೌಶಲ್ಯಗಳ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಒಟ್ಟು 13 ಬಹುಮಾನಗಳನ್ನು ಪಡೆದುಕೊಂಡಿದೆ.

ಈ ಮೂಲಕ ಬೆಳಗಾವಿ ನಗರ ಘಟಕವು (11 ಪದಕ + 2 ಟ್ರೋಫಿ) ಗಳೊಂದಿಗೆ ವಲಯ ಮಟ್ಟದಲ್ಲಿ ಸರ್ವೋತ್ತಮ ದ್ವಿತೀಯ ಸ್ಥಾನ ಪಡೆದು ಗೌರವಕ್ಕೆ ಪಾತ್ರವಾಗಿದೆ.

Home add -Advt

ಬಹುಮಾನ ಪಡೆದ ಅಧಿಕಾರಿ/ಸಿಬ್ಬಂದಿ ವಿವರ

ಮಂಜುನಾಥ ಬಡಿಗೇರ ಪಿಎಸ್ಐ, ಬೆಳಗಾವಿ ನಗರ- ಒಟ್ಟು 1 ಬಹುಮಾನ

(ಮೆಡಿಕೋ ಲೀಗಲ್ – ತೃತೀಯ)

ಸಂತೋಷ ದಳವಾಯಿ ಪಿಎಸ್ಐ, ಬೆಳಗಾವಿ ಗ್ರಾಮೀಣ ಠಾಣೆ – ಒಟ್ಟು 03 ಬಹುಮಾನ

ಫಿಂಗರ್‌ಪ್ರಿಂಟ್ ಪ್ರಾಕ್ಟಿಕಲ್ ಟೆಸ್ಟ್ – ಪ್ರಥಮ,ಮೆಡಿಕೋ ಲೀಗಲ್ – ದ್ವಿತೀಯ ಹಾಗೂ ಫ್ಲಾಂಡ್ರಿಂಗ್, ಲಿಫ್ಟಿಂಗ್, ವ್ಯಾಕಿಂಗ್ ಟೆಸ್ಟ್ – ತೃತೀಯ

ಸರದಾರಗೌಡ ಮುತ್ತತ್ತಿ ಪಿಎಸ್ಐ, ಖಡೇಬಜಾರ ಠಾಣೆ – ಒಟ್ಟು 03 ಬಹುಮಾನ

ಫ್ಲಾಂಡ್ರಿಂಗ್, ಲಿಫ್ಟಿಂಗ್, ವ್ಯಾಕಿಂಗ್ ಟೆಸ್ಟ್ – ದ್ವಿತೀಯ, ಫಿಂಗರ್ ಪ್ರಿಂಟ್ ಪ್ರಾಕ್ಟಿಕಲ್ ಟೆಸ್ಟ್ – ತೃತೀಯ ಹಾಗೂ ಫಾರೆನ್ಸಿಕ್ ಸೈನ್ಸ್ ಲಿಖಿತ ಪರೀಕ್ಷೆ – ತೃತೀಯ, ಡಾಗ್ ಸ್ಕ್ವಾಡ್, ಬೆಳಗಾವಿ ನಗರ – ಒಟ್ಟು 3 ಬಹುಮಾನ

ರುದ್ರಯ್ಯಾ ಮಾವಿನಕಟ್ಟಿಮಠ ಎಪಿಸಿ 116, ಕ್ರೈಂ ಟ್ರ್ಯಾಕರ್ ಪ್ರಥಮ, (ಡಾಗ್ ಸ್ಕ್ವಾಡ್ ಓವರ್ ಆಲ್ ಚಾಂಪಿಯನ್ (ವಿನ್ನರ್ ಟ್ರೋಫಿ) ಹೀಗೆ ಅನೇಕ ವಿಭಾಗದಲ್ಲಿ ಪ್ರಶಸ್ತಿಗಳು ಲಭಿಸಿವೆ.

8ನೇ ಬೆಳಗಾವಿ ಉತ್ತರ ವಲಯ ಮಟ್ಟದ ಕರ್ತವ್ಯ ಕೂಟ – 2026ರಲ್ಲಿ ಬೆಳಗಾವಿ ನಗರ ಪೊಲೀಸ್ ತಂಡವು ಒಟ್ಟು 13 ಬಹುಮಾನಗಳನ್ನು ಪಡೆದು ವಲಯ ಮಟ್ಟದಲ್ಲಿ ಸರ್ವೋತ್ತಮ ದ್ವಿತೀಯ ಸ್ಥಾನದಲ್ಲಿ ನಿಂತಿದ್ದು, ಈ ಎಲ್ಲಾ ಅಧಿಕಾರಿ ಸಿಬ್ಬಂದಿಯವರ ಶಿಸ್ತು, ಸಮರ್ಪಣೆ, ವೃತ್ತಿಪರ ಕೌಶಲ್ಯ, ತಂಡದ ಕಾರ್ಯಕ್ಷಮತೆ ಮತ್ತು ಕರ್ತವ್ಯ ಬದ್ಧತೆಯಿಂದ ಈ ಅತ್ಯುತ್ತಮ ಸಾಧನೆಗೆ ಸಾಧ್ಯವಾಗಿದೆ.

ಜೆ ಹೆಚ್. ಶೇಖ್ ಎಆರ್‌ಪಿಎಸ್ ಸಿಎಆರ್ ವಿಭಾಗ, ಬೆಳಗಾವಿ ನಗರ ಇವರ ನೇತೃತ್ವದಲ್ಲಿ ತಂಡವು ಈ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ನಮ್ಮ ಬೆಳಗಾವಿ ನಗರ ಪೊಲೀಸ್ ಘಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಈ ಸಾಧನೆಗೆ ಕಾರಣರಾದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಆಯುಕ್ತರು ವಿಶೇಷ ಬಹುಮಾನ ಘೋಷಿಸಿ, ಅವರನ್ನು ಪ್ರೋತ್ಸಾಹಿಸಿರುತ್ತಾರೆ. ಜೊತೆಗೆ ಡಿಸಿಪಿ (ಕಾ ಸು), ಡಿಸಿಪಿ (ಅ ಸ) ಹಾಗೂ ಡಿಸಿಪಿ (ಸಿಎಆರ್) ಬೆಳಗಾವಿ ನಗರ ರವರು ಸಹ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Related Articles

Back to top button