ಹವಾಮಾನ ವೈಪರೀತ್ಯದಿಂದ ಆತಂಕ: ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಇದ್ದ ವಿಮಾನ ಸೇಫ್ ಲ್ಯಾಂಡಿಂಗ್

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಹವಾಮಾನ ವೈಪರೀತ್ಯದಿಂದಾಗಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಕಾಲದಲ್ಲಿ ಲ್ಯಾಂಡ್ ಆಗದೆ ಕೆಲ ಕಾಲ ಆತಂಕಕ್ಕೆ ಕಾರಣವಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರಿದ್ದ ವಿಮಾನ ಬೆಳಗ್ಗೆ 7.30ಕ್ಕೆ ಲ್ಯಾಂಡ್ ಆಈಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡ್ ಆಗಲಿ ಅಡ್ಡಿಯಾಯಿತು.

ಇದರಿಂದಾಗಿ ಆಗಸದಲ್ಲೇ ಸುತ್ತಾಡಿ ಅರ್ಧ ಗಂಟೆ ನಂತರ ಲ್ಯಾಂಡ್ ಆಯಿತು. ವಿಮಾನ ಸಕಾಲಕ್ಕೆ ಲ್ಯಾಂಡ್ ಆಗದ್ದರಿಂದಾಗಿ ಎಲ್ಲರಲ್ಲೂ ಕೆಲ ಕಾಲ ಆತಂಕ ಉಂಟಾಗಿತ್ತು.

ಅರ್ಧ ಗಂಟೆ ನಂತರ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಹವಾಮಾನ್ ವೈಪರೀತ್ಯದಿಂದ ಲ್ಯಾಂಡಿಂಗ್ ವಿಳಂಬವಾಯಿತು. ನಮಗೇನೂ ತೊಂದರೆಯಾಗಲಿಲ್ಲ ಎಂದು ಬೊಮ್ಮಾಯಿ ಮತ್ತು ಪ್ರಹ್ಲಾದ ಜೋಶಿ ತಿಳಿಸಿದರು.

ಬೆಳಗ್ಗೆ 6.05ಕ್ಕೆ ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನದಲ್ಲಿ ಅವರು ಪ್ರಯಾಣಿಸಿದ್ದರು. ಬೊಮ್ಮಾಯಿ ವಿಧಾನ ಪರಿಷತ್ ಚುನಾವಣೆ ಮತ ಚಲಾಯಿಸಲು ಶಿಗ್ಗಾವಿಗೆ ತೆರಳಿದರು.

ಈ ಸುದ್ದಿ ಓದಿ –

ನಾಳೆ ಸಿಎಂ ಬೊಮ್ಮಾಯಿ ಬೆಳಗಾವಿಗೆ: ಪರಿಷತ್ ಚುನಾವಣೆಯ ಒಂದು ಮತದ ಮೌಲ್ಯ ನೋಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button