Latest

ನಾಳೆ ಸಿಎಂ ಬೊಮ್ಮಾಯಿ ಬೆಳಗಾವಿಗೆ: ಪರಿಷತ್ ಚುನಾವಣೆಯ ಒಂದು ಮತದ ಮೌಲ್ಯ ನೋಡಿ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಶುಕ್ರವಾರ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಒಂದು ಮತದ ಮೌಲ್ಯ ಎಷ್ಟು? ಇದನ್ನು ಯಾವ ರೀತಿಯಲ್ಲಿ ಲೆಕ್ಕ ಹಾಕಬಹುದು? ಮತದಾರರಿಗೆ ಅಭ್ಯರ್ಥಿಗಳು ಹಂಚುವ ಹಣದ ಮೇಲೆ ಲೆಕ್ಕ ಹಾಕಬಹುದೆ?

ನಾಳೆ ವಿಧಾನ ಪರಿಷತ್ ಚುನಾವಣೆಯ ಮತ ಚಲಾಯಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ ಪಟ್ಟಿ ನೋಡಿದರೆ ಮತದ ಮೌಲ್ಯ ನಿಮಗೆ ಅರ್ಥವಾದೀತು.

ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ 7.30ಕ್ಕೆ ಹುಬ್ಬಳ್ಳಿಗೆ ಆಗಮಿಸಲಿರುವ ಬಸವರಾಜ ಬೊಮ್ಮಾಯಿ ಅಲ್ಲಿಂದ ರಸ್ತೆ ಮಾರ್ಗವಾಗಿ ಶಿಗ್ಗಾಂವ್ ಗೆ ತೆರಳುವರು.

ಶಿಗ್ಗಾಂವ್ ದಲ್ಲಿ ವಿಧಾನ ಪರಿಷತ್ ಚುನಾವಣೆಯ ಮತ ಚಲಾಯಿಸುವ ಬೊಮ್ಮಾಯಿ ಅಲ್ಲಿಂದ 12 ಗಂಟೆಗೆ ರಸ್ತೆ ಮೂಲಕ 2.15ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಸಾಂಬ್ರಾದಿಂದ 3.15ಕ್ಕೆ ಇಂಡಿಗೋ ವಿಮಾನದ ಮೂಲಕ ತೆರಳಿ 4.45ಕ್ಕೆ ಬೆಂಗಳೂರಿಗೆ ತಲುಪುವರು.

ಒಂದೇ ಒಂದು ಮತ ಚಲಾಯಿಸುವುದಕ್ಕೋಸ್ಕರ ಮುಖ್ಯಮಂತ್ರಿಗಳು ಇಡೀ ದಿನವನ್ನು ಮೀಸಲಿಟ್ಟಿದ್ದು, ಲಕ್ಷಾಂತರ ರೂ. ವ್ಯಯಿಸುತ್ತಿದ್ದಾರೆ. (ಇದು ಸಾರ್ವಜನಿಕರ ತೆರಿಗೆ ಹಣವಾದರೂ ಮುಖ್ಯಮಂತ್ರಿಗಳು ಮತ ಚಲಾಯಿಸದೇ ಇದ್ದಲ್ಲಿ ಅದು ದೊಡ್ಡ ಸುದ್ದಿಯಾಗುತ್ತದೆ ಎನ್ನುವುದು ಬೇರೆ)

ಕಾಶಿಯಲ್ಲಿ ಗಂಗಾ ಆರತಿಯಂತೆ ದಕ್ಷಿಣದಲ್ಲಿ ತುಂಗಾ ಆರತಿ ಮಂಟಪ ನಿರ್ಮಾಣ: ಸಿಎಂ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button